×
Ad

ಬಿಐಎಸ್‌ನಿಂದ ದೇಶಾದ್ಯಂತ ದಾಳಿ ಪರವಾನಿಗೆ ರಹಿತ ದೊಡ್ಡ ಪ್ರಮಾಣದ ಆಟಿಕೆಗಳ ವಶ

Update: 2023-01-12 22:41 IST

ಹೊಸದಿಲ್ಲಿ, ಜ. 12: ದೇಶಾದ್ಯಂತ ದಾಳಿ ನಡೆಸಿರುವ ಬ್ಯೂರೊ ಆಫ್ ಇಂಡಿಯನ್ ಸ್ಟಾಂಡರ್ಡ್ (ಬಿಐಎಸ್) ಅಧಿಕಾರಿಗಳು ಮೌಲ್ಯಯುತ ಬಿಐಎಸ್ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ದೊಡ್ಡ ಪ್ರಮಾಣದ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. 

ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಆಟಿಕೆ ಮಾರಾಟ ಮಾಡುವುದನ್ನು ತಡೆಯಲು ಆಟಿಕೆಗಳ (ಗುಣಮಟ್ಟ ನಿಯಂತ್ರಣ) ಆದೇಶ -2020 ಅಡಿಯಲ್ಲಿ ಆಟಿಕೆಗಳಿಗೆ ಬಿಐಎಸ್ ಪ್ರಮಾಣೀಕರಣ 2021 ಜನವರಿಯಲ್ಲಿ ಕಡ್ಡಾಯಗೊಳಿಸಲಾಗಿತ್ತು. ಉತ್ಪಾದನೆ, ಆಮದು, ಮಾರಾಟ, ದಾಸ್ತಾನು ಹಾಗೂ ಮಾರಾಟಕ್ಕೆ ಪ್ರದರ್ಶನ ಮಾಡುವ ಎಲ್ಲ ಆಟಿಕೆಗಳಿಗೆ ಬಿಐಎಸ್ ಪ್ರಮಾಣಿತ ಗುರುತು ಅಗತ್ಯ ಇದೆ. ಆಟಿಕೆಗಳ ಆದೇಶವನ್ನು ಉಲ್ಲಂಘಿಸುವ ಮೂಲಕ ವ್ಯಾಪಾರಿಗಳು ಬಿಐಎಸ್ ಕಾಯ್ದೆ 2016ರ ಸೆಕ್ಷನ್ 16 ಹಾಗೂ 17ನ್ನು ಉಲ್ಲಂಘಿಸಿದ್ದಾರೆ.

ಮೌಲ್ಯಯುತ ಬಿಐಎಸ್ ಪರವಾನಿಗೆ ಇಲ್ಲದೆ ಆಟಿಕೆಗಳನ್ನು ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಬಿಐಎಸ್ ರಾಷ್ಟ್ರವ್ಯಾಪಿ ಜ್ಯಾರಿ ಅಭಿಯಾನ ನಡೆಸಿದೆ ಎಂದು ಬಿಐಎಸ್ ಅಧಿಕೃತ ಹ್ಯಾಂಡಲ್ ಜನವರಿ 10ರಂದು ಟ್ವೀಟ್‌ನಲ್ಲಿ ಹೇಳಿದೆ.

Similar News