ಅಮೆರಿಕದ ಸೆನೆಟರ್ ಆಗ ಭಾರತೀಯ ಮೂಲದ ಮಹಿಳೆ ಆಯ್ಕೆ

Update: 2023-01-13 18:44 GMT

ನ್ಯೂಯಾರ್ಕ್, ಜ.13: ಅಮೆರಿಕದ ಕನ್ಸಾಸ್ ರಾಜ್ಯದ ಸೆನೆಟರ್ ಆಗಿ ಭಾರತೀಯ ಮೂಲದ ಅಮೆರಿಕನ್, ಡೆಮೊಕ್ರಟಿಕ್ ಪಕ್ಷದ ಸದಸ್ಯೆ ಉಷಾ ರೆಡ್ಡಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ತಿಂಗಳು ಸೆನೆಟರ್ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ ಹಿರಿಯ ಸದಸ್ಯ ಟಾಮ್ ಹಾಕ್ ಅವರ ಸ್ಥಾನಕ್ಕೆ ಉಷಾ ರೆಡ್ಡಿ ನೇಮಕಗೊಂಡಿದ್ದು ಅವರ ಸದಸ್ಯತ್ವ 2025ರವರೆಗೆ ಮುಂದುವರಿಯಲಿದೆ. ಸಮುದಾಯದ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿರುವ ಉಷಾ ರೆಡ್ಡಿ 2013ರಿಂದ ಮ್ಯಾನ್ಹಟನ್ ನಗರ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರಲ್ಲದೆ 2 ಬಾರಿ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. 1973ರಲ್ಲಿ ಉಷಾ ಅವರ ಕುಟುಂಬ ಭಾರತದಿಂದ ಅಮೆರಿಕಕ್ಕೆ ವಲಸೆ ಬಂದಾಗ ಉಷಾ 8 ವರ್ಷದವರಾಗಿದ್ದರು. 

Similar News