×
Ad

ಟೆಸ್ಟ್ ತಂಡದಲ್ಲಿ ಸರ್ಫರಾಝ್ ಖಾನ್ ಕಡೆಗಣಿಸಿ ಸೂರ್ಯಕುಮಾರ್ ಗೆ ಮಣೆ: ರಣಜಿ ಟ್ರೋಫಿಗೆ ಅವಮಾನ ಎಂದ ನೆಟ್ಟಿಗರು

Update: 2023-01-14 13:04 IST

ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ (BCCI) ಶುಕ್ರವಾರ ಪ್ರಕಟಿಸಿದೆ.  ದೇಶೀಯ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ನಲ್ಲಿ ಮಿಂಚಿರುವ ಪೃಥ್ವಿ ಶಾಗೆ  ನ್ಯೂಝಿಲ್ಯಾಂಡ್ ವಿರುದ್ಧ ಟ್ವೆಂಟಿ-20 ತಂಡಕ್ಕೆ ಬುಲಾವ್ ನೀಡಲಾಗಿದೆ. ಆದರೆ ಸೂರ್ಯಕುಮಾರ್ ಯಾದವ್ ಹಾಗೂ  ಇಶಾನ್ ಕಿಶನ್ ರಿಗೆ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಯ ಮೊದಲ 2 ಪಂದ್ಯಗಳಿಗೆ ಸರ್ಫರಾಝ್ ಖಾನ್ (Sarfaraz Khan) ಅವರನ್ನು ಕಡೆಗಣಿಸಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಆಯ್ಕೆ ಸಮಿತಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

2021-22 ರ ರಣಜಿ ಟ್ರೋಫಿಯಲ್ಲಿ ಸರ್ಫರಾಝ್ ನಾಲ್ಕು ಶತಕಗಳು ಹಾಗೂ  ಎರಡು ಅರ್ಧ ಶತಕಗಳೊಂದಿಗೆ 122.75 ರ ಸರಾಸರಿಯಲ್ಲಿ 982 ರನ್ ಗಳಿಸಿದ್ದರು. ಅವರ ಅತ್ಯುತ್ತಮ ಸ್ಕೋರ್ 275.  ಪ್ರಸಕ್ತ ನಡೆಯುತ್ತಿರುವ ರಣಜಿ ಆವೃತ್ತಿಯಲ್ಲೂ ಖಾನ್  ಅವರು ಎರಡು ಶತಕಗಳು, ಒಂದು ಅರ್ಧ ಶತಕದೊಂದಿಗೆ 107.75 ರ ಸರಾಸರಿಯಲ್ಲಿ 431 ರನ್ ಗಳನ್ನು 70.54 ರ ಸ್ಟ್ರೈಕ್-ರೇಟ್ ನಲ್ಲಿ ಕಲೆ ಹಾಕಿದ್ದಾರೆ

ಆದಾಗ್ಯೂ, ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು ಸೂರ್ಯಕುಮಾರ್ ಯಾದವ್‌ಗೆ ಭಾರತದ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲು ನಿರ್ಧರಿಸಿದೆ.  ಸೀಮಿತ ಓವರ್ ಕ್ರಿಕೆಟ್ ವಿಶೇಷವಾಗಿ ಟಿ-20 ಕ್ರಿಕೆಟ್‌ನಲ್ಲಿ ಯಾದವ್ ಅವರ ಭರ್ಜರಿ ಫಾರ್ಮ್ ಅನ್ನು ಪರಿಗಣಿಸಿ ಟೆ್ಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿದೆ.

"ಸರ್ಫರಾಝ್ ಖಾನ್ ಅವರನ್ನು ಕಡೆಗಣಿಸಿ ಸೂರ್ಯಕುಮಾರ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿರುವುದು ರಣಜಿ ಟ್ರೋಫಿಗೆ ಮಾಡಿರುವ ಅವಮಾನ. ಖಾನ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಎಲ್ಲರಿಗಿಂತಲೂ ಖಾನ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲು ಹೆಚ್ಚು ಅರ್ಹರಾಗಿದ್ದರು. ಆಯ್ಕೆ ಸಮಿತಿಯಿಂದ ಮತ್ತೊಮ್ಮೆ ಗೊಂದಲ ಆಯ್ಕೆ ನಡೆದಿದೆ''  ಎಂದು ಶಿವಾನಿ ಶುಕ್ಲಾ ಎಂಬುವವರು ಟ್ವಿಟಿಸಿದ್ದಾರೆ.

"ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅಕ್ಷರಶಹ ಬಾಗಿಲು ಮುರಿದಿರುವ ಸರ್ಪರಾಝ್ ಖಾನ್ ಗೆ ಇದು ಕಹಿ ಸುದ್ದಿ. ನಿಮಗೆ ಅವರಿಗಿಂತ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ'' ಎಂದು ವೀಕ್ಷಕವಿವರಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.

Similar News