ನಿತ್ಯಾನಂದನ ವಶದಿಂದ ಬಾಲಕಿಯರನ್ನು ಹಿಂದೆ ತರುವಲ್ಲಿ ವೈಪಲ್ಯ: ಕೇಂದ್ರ ಸರಕಾರಕ್ಕೆ ಗುಜರಾತ್ ಹೈಕೋರ್ಟ್ ತರಾಟೆ

Update: 2023-01-14 18:05 GMT

ಹೊಸದಿಲ್ಲಿ, ಜ. 14: ಅತ್ಯಾಚಾರ ಆರೋಪಿ ಹಾಗೂ ಸ್ವಘೋಷಿತ ದೇವ ಮಾನವ ನಿತ್ಯಾನಂದನ ವಶದಲ್ಲಿ ವಿದೇಶದಲ್ಲಿದ್ದಾರೆ ಎಂದು ಹೇಳಲಾದ ಇಬ್ಬರು ಬಾಲಕಿಯರನ್ನು ಹಿಂದೆ ಕರೆ ತರಲು ವಿಫಲವಾದ ಕೇಂದ್ರ ಗೃಹ ಸಚಿವಾಲಯವನ್ನು ಗುಜರಾತ್ ಉಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಬಾಲಕಿಯರ ತಂದೆ 2019ರಲ್ಲಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ಎನ್.ವಿ. ಅಂಜರಿಯಾ ಹಾಗೂ ನಿರಾಲ್ ಆರ್. ಮೆಹ್ತಾ ಅವರನ್ನು ಒಳಗೊಂಡ ಪೀಠ ಕೇಂದ್ರ ಸರಕಾರದಿಂದ ಪ್ರತಿಕ್ರಿಯೆ ಕೋರಿದೆ. ಬಾಲಕಿಯರನ್ನು ನಿತ್ಯಾನಂದ ಬಲವಂತವಾಗಿ ಭಾರತದ ಹೊರಗಿರುವ ಬಹಿರಂಗಪಡಿಸದ ಸ್ಥಳಕ್ಕೆ ಕರೆದೊಯ್ದಿದ್ದಾನೆ ಎಂದು ಅರ್ಜಿಯಲ್ಲಿ ಹೇಳಿರುವ ಅವರು, ಮಕ್ಕಳ ವಶಕ್ಕೆ ಕೋರಿದ್ದಾರೆ.

2019ರಲ್ಲಿ ಭಾರತ ನಿತ್ಯಾನಂದನ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿತ್ತು ಹಾಗೂ ಹೊಸ ಅರ್ಜಿಯನ್ನು ತಿರಸ್ಕರಿಸಿತ್ತು. ಆತ ಮಕ್ಕಳನ್ನು ಅಪಹರಿಸಿದ್ದಾನೆ ಹಾಗೂ ಅವರನ್ನು ತನ್ನ ಆಶ್ರಮಕ್ಕೆ ಹಣ ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ನಿತ್ಯಾನಂದ ಲ್ಯಾಟಿನ್ ಅಮೆರಿಕದ ಈಕ್ವೆಡಾರ್ ಸಮೀಪ ‘‘ಕೈಲಾಸ’’ ಎಂದು ಕರೆಯಲಾಗುಗುವ ಸ್ವತಂತ್ರ ದೇಶವನ್ನು ಖರೀದಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

Similar News