​ಹಿಮಾಚಲ ಪ್ರದೇಶ: ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸದಸ್ಯ ಬಂಧನ

Update: 2023-01-15 18:27 GMT

ಚಂಡಿಗಢ, ಜ. 15: ಭೂಗತ ಪಾತಕಿ ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸಕ್ರಿಯ ಸದಸ್ಯನೋರ್ವನನ್ನು ಹಿಮಾಚಲಪ್ರದೇಶದಿಂದ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ರವಿವಾರ ತಿಳಿಸಿದ್ದಾರೆ.

ಬಂಧಿತನನ್ನು ಇಂದರ್‌ಪ್ರೀತ್ ಸಿಂಗ್ ಆಲಿಯಾಸ್ ಪ್ಯಾರಿ ಎಂದು ಗುರುತಿಸಲಾಗಿದೆ. ಈತ ಪಂಜಾಬ್ ಹಾಗೂ ಹರ್ಯಾಣದಲ್ಲಿ ಹಲವು ಹತ್ಯೆ ಆರೋಪಗಳನ್ನು ಎದುರಿಸುತ್ತಿದ್ದಾನೆ ಎಂದು ಡಿಜಿಪಿ ಗೌರವ್ ಯಾದವ್ ಅವರು ಹೇಳಿದ್ದಾರೆ.

ಫರೀದ್‌ಕೋಟ್‌ನಲ್ಲಿ ಪ್ರದೀಪ್ ಸಿಂಗ್ ಎಂಬವರನ್ನು ಹತ್ಯೆಗೈದಿರುವುದು ಸೇರಿದಂತೆ 12ಕ್ಕೂ ಅಧಿಕ ಕೊಲೆ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಈತ ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸಕ್ರಿಯ ಸದಸ್ಯ ಎಂದು ಯಾದವ್ ಅವರು ತಿಳಿಸಿದ್ದಾರೆ.

Similar News