ಆರೆಸ್ಸೆಸ್ ಕಛೇರಿಗೆ ಹೋಗಬೇಕಿದ್ದರೆ ನನ್ನ ತಲೆ ಕಡಿಯಬೇಕು: ರಾಹುಲ್‌ ಗಾಂಧಿ

"ವರುಣ್‌ ಗಾಂಧಿ ಸಿದ್ಧಾಂತವನ್ನು ಒಪ್ಪಲು ಸಾಧ್ಯವಿಲ್ಲ"

Update: 2023-01-17 14:48 GMT

ಹೊಸದಿಲ್ಲಿ: "ವರುಣ್‌ ಗಾಂಧಿ ಬಿಜೆಪಿಯಲ್ಲಿದ್ದಾರೆ. ಹೀಗಿರುವಾಗ ಅವರು ನಮ್ಮ ಜೊತೆ ಪಾಲ್ಗೊಂಡರೆ ಅದು ಅವರಿಗೆ ಸಮಸ್ಯೆ ಸೃಷ್ಟಿಸಬಹುದು. ನನ್ನ ಕುಟುಂಬ ಒಂದು ಸಿದ್ಧಾಂತ ಹೊಂದಿದೆ, ವರುಣ್‌ ಇನ್ನೊಂದು ಸಿದ್ಧಾಂತ ಹೊಂದಿದ್ದಾರೆ ಹಾಗೂ ಅದನ್ನು ನನಗೆ ಒಪ್ಪಲು ಸಾಧ್ಯವಿಲ್ಲ. ನನಗೆ ಆರೆಸ್ಸೆಸ್‌ ಕಚೇರಿಗೆ ಹೋಗಲು ಸಾಧ್ಯವಿಲ್ಲ. ಅದಕ್ಕಿಂತ  ಮೊದಲು ನನ್ನ ತಲೆ ಕಡಿಯಬೇಕು," ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ನಿಮ್ಮ ಸೋದರ ಸಂಬಂಧಿ ವರುಣ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಪಂಜಾಬ್‌ನ ಹೋಶಿಯಾರಪುರದಲ್ಲಿ ರಾಹುಲ್‌ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ವರುಣ್‌ ಗಾಂಧಿ ತಮ್ಮ ಪಕ್ಷವಾದ ಬಿಜೆಪಿಯನ್ನು ಆಗಾಗ ಟೀಕಿಸುತ್ತಿರುವುದರಿಂದ ಅವರು ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದೆಂಬ ವದಂತಿ ಹರಿದಾಡಿತ್ತು.

Similar News