ನ್ಯೂಝಿಲ್ಯಾಂಡ್ ವಿರುದ್ಧ ಚೊಚ್ಚಲ ದ್ವಿಶತಕ ದಾಖಲಿಸಿದ ಶುಭಮನ್ ಗಿಲ್

ಭಾರತ 8 ವಿಕೆಟ್ ನಷ್ಟಕ್ಕೆ 349 ರನ್

Update: 2023-01-18 11:58 GMT

 ಹೈದರಾಬಾದ್, ಜ.18: ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಚೊಚ್ಚಲ ದ್ವಿಶತಕದ ಸಹಾಯದಿಂದ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿದೆ.

ಬುಧವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಪರ ಗಿಲ್ 147 ಎಸೆತಗಳಲ್ಲಿ 19 ಬೌಂಡರಿ ಹಾಗೂ 9 ಸಿಕ್ಸರ್ ಗಳ ಸಹಾಯದಿಂದ 208 ರನ್ ಗಳಿಸಿ ಏಕಾಂಗಿ ಹೋರಾಟ ನೀಡಿದರು.

23ರ ಹರೆಯದ ಗಿಲ್ ದ್ವಿಶತಕ ಗಳಿಸಿದ ಕಿರಿಯ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು. ಗಿಲ್ ಕೇವಲ 145 ಎಸೆತಗಳಲ್ಲಿ ಫರ್ಗ್ಯುಸನ್ ಎಸೆತದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ 19 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಹಾಯದಿಂದ ದ್ವಿಶತಕ ಪೂರೈಸಿದರು.

ರೋಹಿತ್ ಶರ್ಮಾ(34 ರನ್, 38 ಎಸೆತ), ಸೂರ್ಯಕುಮಾರ್ ಯಾದವ್(31 ರನ್), ಹಾರ್ದಿಕ್‌ಪಾಂಡ್ಯ(28 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ನ್ಯೂಝಿಲ್ಯಾಂಡ್ ಪರ ಡರ್ಲ್ ಮಿಚೆಲ್ (2-30)ಯಶಸ್ವಿ ಬೌಲರ್‌ಎ ನಿಸಿಕೊಂಡರು.
 

Similar News