ಬಹು ಸಂಸ್ಕೃತಿಯನ್ನು ನಾಶ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ: ಬರಗೂರು ರಾಮಚಂದ್ರಪ್ಪ ಬೇಸರ

Update: 2023-01-19 17:05 GMT

ಬೆಂಗಳೂರು, ಜ.19: ಬಹುತ್ವ ಪ್ರತಿಪಾದಿಸುವ ಈ ದೇಶದಲ್ಲಿ ಬಹು ಸಂಸ್ಕೃತಿಯನ್ನು ನಾಶ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು. 

ಗುರುವಾರ ನಗರದ ಕೊಂಡಜ್ಜಿ ಬಸಪ ಸಭಾಂಗಣದಲ್ಲಿ  ವಿವಿಧ ಪ್ರಗತಿಪರ ಸಂಘಟನೆಗಳು, ಕ್ಯೂಬಾ ಸೌಹಾರ್ದತಾ ಸಮಿತಿ ಆಯೋಜಿಸಿದ್ದ 'ನಮ್ಮ ಚೇ ನಮ್ಮೊಳಗೆ ಚೇ'ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಬಹುಮುಖದ ಆಶಯದಲ್ಲಿ ಸರ್ವಾಧಿಕಾರ ಮೆರೆಯಲಾಗುತ್ತಿದೆ. ಹುಸಿ ಸಂಸ್ಕೃತಿಯನ್ನೇ ನಿಜ ಸಂಸ್ಕೃತಿ ಎಂದು ಮೆರೆಯಲಾಗುತ್ತಿದೆ.ಆದರೆ, ಸಮಾನತೆ, ಸೌಹಾರ್ದತೆ ಪರವಾದ ಬದ್ಧತೆ ಭಾರತಕ್ಕೆ ಬೇಕು. ಜಾತಿವಾದ, ಕೋಮುವಾದದ ವಿರುದ್ಧದ ಹೋರಾಟಕ್ಕೆ ಅವರೇ ನಮ್ಮ "ಚೇ"ತನ ಎಂದು ಹೇಳಿದರು.

‘ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ‘ಸಾಮಾಜಿಕ ಚಿಂತನ ಮಾಲೆ’ ಎಂಬ ಕೃತಿಯನ್ನು ಹೊರತರಲಾಗಿತ್ತು. ಚೆ ಗೆವಾರ ಅವರ ಕುರಿತಾದ ಲೇಖನವೂ ಅದರಲ್ಲಿತ್ತು. ಅದು ಪ್ರಜಾಪ್ರಭುತ್ವದ ಸ್ವಾತಂತ್ರ್ಯ. ಈಗ ಆ ರೀತಿಯ ಲೇಖನ ಪ್ರಕಟಿಸಿದರೆ ದೇಶದ್ರೋಹಿಗಳಾಗುತ್ತೇವೆ ಎಂದು ಅವರು ತಿಳಿಸಿದರು.

Similar News