ಉಡುಪಿ | ಆನ್‌ಲೈನ್ ವಿದ್ಯುತ್ ಬಿಲ್ ಪಾವತಿ ಹೆಸರಿನಲ್ಲಿ ಸಾವಿರಾರು ರೂ. ಹಣ ವಂಚನೆ: ಪ್ರಕರಣ ದಾಖಲು

Update: 2023-01-20 05:35 GMT

ಉಡುಪಿ, ಜ.20: ವಿದ್ಯುತ್ ಇಲಾಖೆಯ ಅಧಿಕಾರಿ ಎಂದು ನಂಬಿಸಿ ಆನ್ ಲೈನ್‌ನಲ್ಲಿ ವಿದ್ಯುತ್ ಬಿಲ್ ಮಾಡುವ ನೆಪದಲ್ಲಿ ಸಾವಿರಾರು ರೂ. ವಂಚಿಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಾವರ ಬಲಾಯಿಪಾದೆ ನಿವಾಸಿ ಡಿಸೋಜ ವಿಲ್ ಬೀರಿಯಸ್ ಎವಂಗ್ಲಿಸ್ಟ್ ಎಂಬವರಿಗೆ ಸೆ.3ರಂದು ವಿದ್ಯುತ್ ಬಿಲ್ ಆನ್‌ಲೈನ್‌ನಲ್ಲಿ ಪಾವತಿಸುವ ನೆಪದಲ್ಲಿ ಸಂದೇಶ ಬಂದಿದ್ದು, ಈ ಬಗ್ಗೆ ಡಿಸೋಜ ಸಂದೇಶವನ್ನು ವಿದ್ಯುತ್ ಇಲಾಖೆಯ ಅಧಿಕಾರಿಗಳೇ ಕಳುಹಿಸಿರಬಹುದೆಂದು ತಿಳಿದು, ಆ ನಂಬರ್‌ಗೆ ಕರೆ ಮಾಡಿದ್ದರು. ಆಗ ಕರೆ ಸ್ವೀಕರಿಸಿದ ವ್ಯಕ್ತಿ ತಾನು ವಿದ್ಯುತ್ ಇಲಾಖೆಯ ಅಧಿಕಾರಿ ಎಂದು ನಂಬಿಸಿ, ಬ್ಯಾಂಕ್ ಖಾತೆಯ ವಿವರ, ಎಟಿಎಂ ಕಾರ್ಡ್ ವಿವರ, ಸಿವಿವಿ ವಿವರವನ್ನು ಪಡೆದುಕೊಂಡಿದ್ದನು. ಅಲ್ಲದೆ ಡಿಸೋಜ ಅವರ ಮೊಬೈಲ್ ಗೆ ಬಂದ ಒಟಿಪಿಯನ್ನು ಕೂಡ ಪಡೆದು, ಅವರ ಖಾತೆಯಿಂದ ಒಟ್ಟು 79,999ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ, ವಂಚಿಸಿರುವುದಾಗಿ ದೂರಲಾಗಿದೆ.

Similar News