ಸೂರ್ಯವಂಶಂ ಚಿತ್ರವನ್ನು ಎಷ್ಟು ಬಾರಿ ಪ್ರಸಾರ ಮಾಡುತ್ತೀರ? ಸೋನಿ ಮ್ಯಾಕ್ಸ್‌ಗೆ ಪತ್ರ ಬರೆದ ಗ್ರಾಹಕ

Update: 2023-01-20 17:10 GMT

ಮುಂಬೈ: 'ಸೂರ್ಯವಂಶಂ' ಪುನರಾವರ್ತಿತ ಪ್ರಸಾರದಿಂದ ಬೇಸರಗೊಂಡ ವ್ಯಕ್ತಿಯೊಬ್ಬರು ಸೋನಿ ಮ್ಯಾಕ್ಸ್‌ಗೆ ಪತ್ರವನ್ನು ಬರೆದಿದ್ದಾರೆ.

ಈ ಪತ್ರದಲ್ಲಿ ಚಲನಚಿತ್ರದ ಪುನರಾವರ್ತಿತ ಪ್ರಸಾರದ ಬಗ್ಗೆ   ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.  

 ಈ ಚಲನಚಿತ್ರವನ್ನು ಚಾನಲ್‌ನಲ್ಲಿ ಎಷ್ಟು ಪ್ರಸಾರ ಮಾಡಲಾಗಿದೆ ಮತ್ತು ಭವಿಷ್ಯದಲ್ಲಿ ಚಲನಚಿತ್ರವನ್ನು ಎಷ್ಟು ಬಾರಿ ಪ್ರಸಾರ ಮಾಡಲಾಗುತ್ತದೆ ಎಂಬಂತಹ ಪ್ರಶ್ನೆಗಳನ್ನು ಪತ್ರದಲ್ಲಿ ಕೇಳಲಾಗಿದೆ.   

ಪತ್ರದ ಕೊನೆಯಲ್ಲಿ, ಈ ಚಿತ್ರ ನೋಡಿ ನಮಗೆ ಹುಚ್ಚು ಹಿಡಿದರೆ ಅದಕ್ಕೆ ಯಾರು ಹೊಣೆ ಎಂದು ಪತ್ರ ಬರೆದವರು ಪ್ರಶ್ನಿಸಿದ್ದು, ಸದ್ಯ ಈ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ.

Similar News