×
Ad

ಬೆಳ್ತಂಗಡಿ ಶಾಸಕರಿಂದ ಕಪಾಳ ಮೋಕ್ಷದ ಬೆದರಿಕೆ: ಜಯಾನಂದ ಮಲೆಕುಡಿಯ ಆರೋಪ

Update: 2023-01-21 20:30 IST

ಬೆಳ್ತಂಗಡಿ: ಸವಣಾಲಿನ ಬೈರವಕಲ್ಲಿನ ಬೈರವ, ಮೂಜಿಲ್ನಾಯ, ಪುರುಷರಾಯ ದೈವಗಳ ದೈವಸ್ಥಾನದ ಅಭಿವೃದ್ಧಿಗೆ ಸರಕಾರದ ಅನುದಾನಕ್ಕಾಗಿ ಮಾತುಕತೆ ನಡೆಸಲು ಬೆಳ್ತಂಗಡಿ ಶಾಸಕರ ಮನೆಗೆ ಹೋದ ವೇಳೆ ಶಾಸಕರು ದೈವಸ್ಥಾನ ಟ್ರಸ್ಟ್ ಕಾರ್ಯದರ್ಶಿಯಾಗಿರುವ ತನಗೆ ಸಾರ್ವಜನಿಕರ ಎದುರೇ ಕಪಾಳಮೋಕ್ಷ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿ ಅವಮಾನಿಸಿದ್ದಾರೆ ಎಂದು ಜಯಾನಂದ ಮಲೆಕುಡಿಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವಸ್ಥಾನದ ಪದಾಧಿಕಾರಿಗಳೊಂದಿಗೆ ಶಾಸಕರ ಮನೆಗೆ ಅವರ ಸೂಚನೆಯಂತೆ ತೆರಳಿದ್ದೆವು. ಮಾತನಾಡುತ್ತಿದ್ದ ವೇಳೆ ಶಾಸಕರು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು ವಾಗ್ವಾದ ನಡೆಸಿದ್ದಲ್ಲದೆ, ಸಾರ್ವಜನಿಕರ ಎದುರೇ ಕಪಾಳಮೋಕ್ಷ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿ, ನಿಂದಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

ಮಲೆಕುಡಿಯ ಸಮುದಾಯದ ಈ ದೈವಸ್ಥಾನದ ಅಭಿವೃದ್ದಿಗೆ ಸಮುದಾಯ ಒಟ್ಟಾಗಿ ಶ್ರಮಿಸುತ್ತಿರುವಾಗ ಶಾಸಕರು ಈರೀತಿಯಾಗಿ ಅವಮಾನ ಮಾಡಿರುವುದು ಓರ್ವ ಜವಾಬ್ದಾರಿಯುತ ಜನಪ್ರತಿನಿಧಿಗೆ ಶೋಭೆ ತರುವ ವಿಚಾರವಲ್ಲ ಎಂದಿರುವ ಅವರು ತಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದೇನೆ ಆದರೆ ದೇವಸ್ಥಾನದ ವಿಚಾರದಲ್ಲಿ ನಾವು ಎಲ್ಕ ರಾಜಕೀಯಗಳನ್ನೂ ಬದಿಗಿರಿಸಿ ಒಟ್ಟಾಗಿ ಕೆಲಸ ಮಾಡುತ್ತಿದ್ದೆವೆ ಶಾಸಕರು ಇದರಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯ ಜಯರಾಮ ಮಲೆಕುಡಿಯ, ಲಕ್ಷ್ಮಣ ನೆರಿಯ, ಮಹಾಬಲ ಮಲೆಕುಡಿಯ ಚೇತನ್ ಉಪಸ್ಥಿತರಿದ್ದರು.

Similar News