MEIF ಶೈಕ್ಷಣಿಕ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Update: 2023-01-24 12:22 GMT

ಮಂಗಳೂರು: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ ಮತ್ತು ಉಡುಪಿ ಜಿಲ್ಲೆ (MEIF) ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ ಫೆ. 13 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಶೈಕ್ಷಣಿಕ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಇಂದು MEIF ಆಡಳಿತ ಕಛೇರಿಯಲ್ಲಿ ಎಸ್.ಎಂ.ಆರ್ ಗ್ರೂಪಿನ ಡಾ. ಎಸ್. ಎಂ. ರಶೀದ್ ಹಾಜಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ. ಎ ನಝೀರ್ ಮಾಹಿತಿ ನೀಡಿದರು. 

ಶೈಕ್ಷಣಿಕ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ತರಬೇತುದಾರರಾದ ಡಾ. ಗುರುರಾಜ್ ಕಾರ್ಜಾಗಿಯವರ ಶಿಕ್ಷಕ ತರಬೇತಿ, ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ, ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು, ಮತ್ತು ಪರಿಹಾರ ಕಾನೂನು ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಸಮಾರೋಪ ಸಮಾರಂಭ ಮತ್ತು ಆಡಳಿತ ಮಂಡಳಿ ಸಭೆಯು ಜಿಲ್ಲೆಯ ವಿವಿಧ ಗಣ್ಯರ ಉಪಸ್ಥಿತಿಯೊಂದಿಗೆ ನಡೆಯಲಿದ್ದು, ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಮತ್ತು ಪುರಸ್ಕಾರ ನಡೆಯಲಿದೆ. 

ಗೌರವಧ್ಯಕ್ಷರಾದ ಟಿ.ಕೆ ಉಮರ್ ಪಾಲ್ಗೊಂಡಿದ್ದರು. 

ಈ ಸಮಾರಂಭದಲ್ಲಿ ಉಪಾಧ್ಯಕ್ಷರಾದ ಮುಸ್ತಫ ಸುಳ್ಯ, ಪಧಾಧಿಕಾರಿಗಳಾದ ನಿಸಾರ್ ಕೋಸ್ಟಲ್, ರಿಯಾಝ್ ಅಹ್ಮದ್, ಬಿ ಮಯ್ಯದ್ದಿ, ಇಕ್ಬಾಲ್ ಕೃಷ್ಣಾಪುರ, ಅಮೀನ್ ಅಹ್ಸನ್ ಆತೂರ್, ಮುಹಮ್ಮದ್ ಶಾರಿಕ್ ಕುಂಜತ್ಬೈಲ್, ರಹ್ಮತುಲ್ಲಾಹ್ ಬರೂಜ್, ಇಬ್ರಾಹಿಮ್ ಉಳ್ಳಾಲ, ಅನ್ವರ್ ಗೂಡಿನಬಳಿ ಉಪಸ್ಥಿತರಿದ್ದರು.

Similar News