ಮೂತ್ರ ಮಾಡಿದ ಘಟನೆ ವರದಿ ಮಾಡದ ಏರ್ ಇಂಡಿಯಾಕ್ಕೆ 10 ಲಕ್ಷ ರೂ. ದಂಡ

Update: 2023-01-24 18:14 GMT

ಹೊಸದಿಲ್ಲಿ, ಜ. 24: ಡಿಸೆಂಬರ್ 6ರಂದು ಪ್ಯಾರಿಸ್-ದಿಲ್ಲಿ ವಿಮಾನದಲ್ಲಿ ಇಬ್ಬರು ಪ್ರಯಾಣಿಕರ ಅಶಿಸ್ತಿನ ನಡವಳಿಕೆಯ ಘಟನೆಯನ್ನು ವರದಿ ಮಾಡದೇ ಇರುವುದಕ್ಕೆ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ನಾಗರಿಕ ವಾಯು ಯಾನ ಮಹಾ ನಿರ್ದೇಶನಾಲಯ ಮಂಗಳವಾರ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. 

ಘಟನೆಯ ಕುರಿತು ಡಿಜಿಸಿಎಗೆ ವರದಿ ಮಾಡದೇ ಇರುವುದಕ್ಕೆ ಹಾಗೂ ಘಟನೆಯ ಬಗ್ಗೆ  ತನ್ನ ಆಂತರಿಕ ಸಮಿತಿಗೆ ತಿಳಿಸಲು ವಿಳಂಬಿಸಿರುವುದಕ್ಕಾಗಿ ಡಿಜಿಸಿಎ ಈ ದಂಡ ವಿಧಿಸಿದೆ. 

ಡಿಸೆಂಬರ್ 6ರಂದು ಪ್ಯಾರಿಸ್-ದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೋರ್ವ ಖಾಲಿ ಸೀಟು ಹಾಗೂ ಶೌಚಾಲಯಕ್ಕೆ ತೆರಳಿದ ಮಹಿಳಾ ಪ್ರಯಾಣಿಕರೋರ್ವರ ಹೊದಿಕೆಯ ಮೇಲೆ ಮೂತ್ರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.  
ಅದೇ ವಿಮಾನದಲ್ಲಿ ಇನ್ನೋರ್ವ ಪಾನಮತ್ತ ಪ್ರಯಾಣಿಕ ಶೌಚಾಲಯದಲ್ಲಿ ಸಿಗರೇಟು ಸೇಗುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಅಲ್ಲದೆ ವಿಮಾನ ಸಿಬ್ಬಂದಿ ನೀಡಿದ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದ್ದ ಎಂದು ಹೇಳಲಾಗಿದೆ.  

ಕರ್ತವ್ಯ ಲೋಪಕ್ಕಾಗಿ ತಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಏರ್ ಇಂಡಿಯಾಕ್ಕೆ ಜನವರಿ 23ರಂದು ಶೋಕಾಸ್ ನೋಟೀಸ್ ನೀಡಲಾಗಿದೆ ಎಂದು ಡಿಜಿಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಈ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೋರ್ವ ಶೌಚಾಲಯದಲ್ಲಿ ಸಿಗರೇಟು ಸೇದುತ್ತಿದ್ದಾಗ ಸಿಕ್ಕಿ ಬಿದ್ದಿದ್ದ. ಅಲ್ಲದೆ ವಿಮಾನದ ಸಿಬ್ಬಂದಿ ನೀಡಿದ ಸೂಚನೆಗಳನ್ನು ಅನುಸರಿಸಿರಲಿಲ್ಲ. ಇನ್ನೋರ್ವ ಪ್ರಯಾಣಿಕ ಖಾಲಿ ಸೀಟಿನಲ್ಲಿ ಕುಳಿತುಗೊಂಡಿದ್ದಾನೆ ಹಾಗೂ ಸಹ ಮಹಿಳಾ ಪ್ರಯಾಣಿಕರೋರ್ವರ ಹೊದಿಕೆಯನ್ನು  

Similar News