ಜ.31ರಿಂದ ಬೊಳ್ಳೂರಿನಲ್ಲಿ 40ನೇ ವಾರ್ಷಿಕ ರಿಫಾಯಿ ದಫ್ ರಾತೀಬ್, ದಾರ್ಮಿಕ ಮತಪ್ರವಚನ ಕಾರ್ಯಕ್ರಮ
Update: 2023-01-25 19:30 IST
ಹಳೆಯಂಗಡಿ: ಮುಹಿಯುದ್ದೀನ್ ಜುಮಾ ಮಸ್ಜಿದ್ (ರಿ.) ಬೊಳ್ಳೂರು ಲಿಯಾವುಲ್ ಇಸ್ಲಾಮ್ ದಫ್ ಕಮಿಟಿ, ಬೊಳ್ಳೂರು ಹಳೆಯಂಗಡಿ ಇದರ 40ನೇ ವಾರ್ಷಿಕ ರಿಫಾಯಿ ದಫ್ ರಾತೀಬ್ ನೇರ್ಚೆ ಹಾಗೂ ಧಾರ್ಮಿಕ ಮತ ಪ್ರವಚನ ಮತ್ತು ಕಥಾ ಪ್ರಸಂಗ ಕಾರ್ಯಕ್ರಮ ಜನವರಿ 31ರಿಂದ ಫೆಬ್ರವರಿ 4ರವರೆಗೆ ಜರುಗಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಹುಸೈನಬ್ಬ ಬೊಳ್ಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ