ಸ್ಪೈನ್: ಚರ್ಚ್ ನಲ್ಲಿ ಚೂರಿ ಇರಿತ ಒಬ್ಬ ಮೃತ್ಯು; ಹಲವರಿಗೆ ಗಾಯ

Update: 2023-01-26 15:42 GMT

ಮ್ಯಾಡ್ರಿಡ್, ಜ.26: ದಕ್ಷಿಣ ಸ್ಪೇನ್ನ ಬಂದರು ನಗರ ಅಲ್ಜಿಸಿರಾಸ್ನಲ್ಲಿನ 2 ಚರ್ಚ್ಗಳಲ್ಲಿ ನಡೆದ ಚೂರಿ ಇರಿತ ಪ್ರಕರಣದಲ್ಲಿ ಕನಿಷ್ಟ ಒಬ್ಬ ಮೃತಪಟ್ಟಿದ್ದು ಇತರ ಹಲವರಿಗೆ ಗಾಯವಾಗಿದೆ ಎಂದು ನಗರಾಡಳಿತದ ವಕ್ತಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಬುಧವಾರ ರಾತ್ರಿ ಓರ್ವ ವ್ಯಕ್ತಿ ಎರಡು ವಿಭಿನ್ನ ಚರ್ಚ್ಗಳಲ್ಲಿ ಪಾದ್ರಿಗಳ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾನೆ. ಚೂರಿ ಇರಿತದಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿದ್ದಾರೆ. ಇದನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿ ತನಿಖೆ ನಡೆಸಲಾಗುವುದು. ದಾಳಿ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ವ್ಯಕ್ತಿಯನ್ನು ಡಿಯೆಗೊ ವಲೆನ್ಸಿಯಾ ಎಂದು ಗುರುತಿಸಲಾಗಿದ್ದು ಚರ್ಚ್ ನ ಧರ್ಮಗುರು ಗಂಭೀರವಾಗಿ ಗಾಯಗೊಂಡಿದ್ದು ಇತರ 3 ಮಂದಿ ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ ಎಂದು ಚರ್ಚ್ ನ ಮೂಲಗಳು ಹೇಳಿವೆ. ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಉದ್ದದ ಚೂರಿ ಹಿಡಿದುಕೊಂಡು ಚರ್ಚ್ ಪ್ರವೇಶಿಸುತ್ತಿರುವ ವೀಡಿಯೊವನ್ನು ಸ್ಥಳೀಯ ಟಿವಿ ವಾಹಿನಿ ಪ್ರಸಾರ ಮಾಡಿದೆ.

Similar News