ಎಸ್.ಎಂ.ಆರ್. ಪಬ್ಲಿಕ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

Update: 2023-01-27 05:19 GMT

ಬಂಟ್ವಾಳ, ಜ.26: ಮಾರ್ಣಬೈಲು ಎಂಬಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆ  ಎಸ್.ಎಂ.ಆರ್. ಪಬ್ಲಿಕ್ ಸ್ಕೂಲ್ ನಲ್ಲಿ 74ನೇ ಗಣರಾಜ್ಯೋತ್ಸವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಮಾನವ ಸಂಪನ್ಮೂಲದ ನಿರ್ದೇಶಕ ಝೀಶಾನ್ ರಮ್ಲಾನ್, ಸಂವಿಧಾನದ ಮಹತ್ವದ ಬಗ್ಗೆ ವಿವರಿಸಿದರಲ್ಲದೆ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದರು.

ಎಸ್. ಎಂ. ಆರ್. ಪಬ್ಲಿಕ್ ಸ್ಕೂಲ್ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ರಿಫಾತ್ ಅಹಮದ್ ಅವರು ಕೂಡಾ  ಗಣರಾಜ್ಯೋತ್ಸವ ಸಂದೇಶದೊಂದಿಗೆ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಮುಖ್ಯೋಧ್ಯಾಪಾಯಿನಿ ಫಾತಿಮತುಲ್ ಝಹೀರಾ ಭಾರತದ ವೈವಿಧ್ಯಮಯ ಪಾರಂಪರ್ಯದ ಬಗ್ಗೆ ಮಾಹಿತಿ ನೀಡಿದರು. ಆರನೇ ತರಗತಿಯ ವಿದ್ಯಾರ್ಥಿ ಶಹಝ್ ಅಬ್ದುಲ್ ಖಾದರ್ ಅವರು ಗಣತಂತ್ರ ದಿನದ ಮಹತ್ವವನ್ನು ತಿಳಿಸಿದರು.

ಸಹಾಯಕ ಅಧ್ಯಾಪಕಿ ಶಹಲಾರವರು ಕಾರ್ಯಕ್ರಮ ನಿರೂಪಿಸಿದರು. ರಶೀದಾ ಧನ್ಯವಾದವಿತ್ತರು. ಶಾಲಾ ಸಂಚಾಲಕ ಬಿ.ಕೆ. ಅಬ್ದುಲ್ ಲತೀಫ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿಧ್ಯಾರ್ಥಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Similar News