ಕಂಬಳಬೆಟ್ಟು: ಜನಪ್ರಿಯ ಸೆಂಟ್ರಲ್ ಸ್ಕೂಲ್ ಗೆ ರಾಷ್ಟ್ರೀಯ ಮಟ್ಟದ "ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್"

Update: 2023-01-27 06:34 GMT

ಬಂಟ್ವಾಳ: ವಿಟ್ಲ ಸಮೀಪದ ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಸ್ಕೂಲ್ ಗೆ ರಾಷ್ಟ್ರೀಯ ಮಟ್ಟದ 2022-23 ನೇ ಸಾಲಿನ ಅತ್ಯುತ್ತಮ ಶಾಲೆಗಳ ವಿಭಾಗದಲ್ಲಿ "ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್" ಪ್ರಶಸ್ತಿ ಲಭಿಸಿದೆ.

ಈ ಪ್ರಶಸ್ತಿಯನ್ನು ಇತ್ತೀಚೆಗೆ ತೆಲಂಗಾಣದ ಹೈದರಾಬಾದ್ ನಲ್ಲಿ  ನಡೆದ 10ನೇ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ನೀಡಲಾಯಿತು.

ಬ್ರೈನ್ ಫೀಡ್ ಪತ್ರಿಕಾ ಸಂಸ್ಥೆ ಮತ್ತು ಇಟಿ ಟೆಕ್ ಎಕ್ಸ್ ಸಂಸ್ಥೆಯು ವತಿಯಿಂದ ಆಯೋಜಿಸಲಾದ ಈ ಪ್ರಶಸ್ತಿಯನ್ನು ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಶಾಲೆಯ ನಿರ್ದೇಶಕ  ನೌಶೀನ್ ಬದ್ರಿಯಾ ಹಾಗೂ ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್  ಸಮ್ಮೇಳನದಲ್ಲಿ ಭಾಗಿಯಾಗಿ ಪ್ರಶಸ್ತಿಯನ್ನು ಪಡೆದು ಕೊಂಡರು.

ಹಾಸನದ ಜನಪ್ರಿಯ ಆಸ್ಪತ್ರೆಯ ವೈದ್ಯ ಡಾ.ಅಬ್ದುಲ್ ಬಶೀರ್ ಅವರ ಸಾರಥ್ಯದಲ್ಲಿ ವಿಟ್ಲದ ಕಂಬಳಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ಜನಪ್ರಿಯ ಸೆಂಟ್ರಲ್ ಶಾಲೆಯು ವಿಶ್ವ ದರ್ಜೆಯ ಮೂಲ ಸೌಕರ್ಯಗಳು, ಅಂತರ್ರಾಷ್ಟ್ರೀಯ ದರ್ಜೆಯ ಈಜುಕೊಳ, ಕ್ರೀಡಾ ಉಪಕರಣಗಳು ಹೀಗೆ ಹಲವಾರು ಸೌಕರ್ಯಗಳೊಂದಿಗೆ ಅತ್ತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಜನಪ್ರಿಯ ಶಾಲೆಯು ಮಕ್ಕಳ ಸರ್ವತ್ತೋಮುಖ ಬೆಳವಣಿಗೆಗೆ ಉತ್ತಮ ವೇದಿಕೆಯಾಗಿರುವುದನ್ನು ಗುರುತಿಸಿ ಬ್ರೈನ್ ಫೀಡ್ ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿದೆ.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ನಸ್ರೀನ್ ಬಶೀರ್ ಹಾಗೂ ಶಾಲಾ  ಸಲಹೆಗಾರ ವಿಶ್ವಸಂಸ್ಥೆಯ ಭಾರತದ ರಾಷ್ಟ್ರೀಯ ಕಾರ್ಯದರ್ಶಿ, ಶೈಕ್ಷಣಿಕ ತಜ್ಞ ಡಾ.ರವಿಕುಮಾರ್ ಎಲ್.ಪಿ ರವರ ನಿರ್ದೇಶನದೊಂದಿಗೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಜನಪ್ರಿಯ ಶಾಲೆಯಲ್ಲಿ ಮುಂದಿನ ವರ್ಷಕ್ಕೆ ಅತ್ಯಾಧುನಿಕ  ತಂತ್ರಜ್ಞಾನಗಳನ್ನು ಒಳಗೊಂಡಿರುವ ಹೊಸ ಕಟ್ಟಡವು ಸಿದ್ಧಗೊಂಡಿದ್ದು, ಮುಂದೆಯೂ ಶಾಲೆಯನ್ನು ಮತ್ತಷ್ಟು ಅಭಿವೃಧ್ಧಿಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಶಾಲಾ ಆಡಳಿತ ಮಂಡಳಿಯ ಪ್ರಕಟನೆಯಲ್ಲಿ ತಿಳಿಸಿದೆ.

Similar News