ಟ್ವಿಟರ್‌ ಮಾಲಕರಾಗಲು ಎಲಾನ್‌ ಮಸ್ಕ್‌ ಸೂಕ್ತ ವ್ಯಕ್ತಿ ಎಂದು ಅನಿಸುತ್ತಿಲ್ಲ: ಸಹ-ಸ್ಥಾಪಕ ಬಿಝ್‌ ಸ್ಟೋನ್‌

Update: 2023-01-27 13:16 GMT

ಕ್ಯಾಲಿಫೋರ್ನಿಯಾ: ಟ್ವಿಟರ್‌ ಒಡೆತನ ಹೊಂದಲು ಎಲಾನ್‌ ಮಸ್ಕ್‌ ಅವರು ಸೂಕ್ತವಾದ ವ್ಯಕ್ತಿಯೆಂಬಂತೆ ತೋರುತ್ತಿಲ್ಲ ಎಂದು ಟ್ವಿಟರ್‌ ಸಹ-ಸ್ಥಾಪಕ ಬಿಝ್‌ ಸ್ಟೋನ್‌ ಅವರು theguardian.comಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹೊಸ ಮಾಲಕರ ಅಧೀನದಲ್ಲಿ ಟ್ವಿಟರ್‌ನ ಕಂಟೆಂಟ್‌ ಸಹಿತ ಹಲವು ನೀತಿಗಳನ್ನು ತಿರುವು ಮುರುವುಗೊಳಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ತಾವು ತಂದ ಹಲವು ಸಕಾರಾತ್ಮಕ ಬದಲಾವಣೆಗಳನ್ನೂ ಕೈಬಿಡಲಾಗಿದೆ ಎಂದು ಬಿಝ್‌ ಸ್ಟೋನ್‌ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಕಂಪೆನಿಗಳನ್ನು ನಡೆಸುವುದೆಂದರೆ ಯಾವತ್ತೂ ಗೆಲುವು ದೊರೆಯುತ್ತದೆಯೆಂದೇನಿಲ್ಲ, ಹೆಚ್ಚಿನ ಬಾರಿ ಕಠಿಣವಾಗಿರುತ್ತದೆ, ಏಕೆಂದರೆ ಶೇ 50 ರಷ್ಟು ಜನರಿಗೆ ನಿಮ್ಮ ಬಗ್ಗೆ ಸಮಾಧಾನವಿದ್ದರೆ ಇನ್ನುಳಿದವರಿಗೆ ಅಸಮಾಧಾನವಿರುತ್ತದೆ ಎಂದು ಅವರು ಹೇಳಿದರು.

ಟ್ವಿಟರ್‌ಗೆ ಮಸ್ಕ್‌ ಸೂಕ್ತ ಮಾಲಕರೇ ಎಂದು ಕೇಳಿದಾಗ, "ಸದ್ಯ ಹಾಗನಿಸುತ್ತಿಲ್ಲ, ಆದರೆ ನಾನು ಹೇಳಿದ್ದು ತಪ್ಪೂ ಆಗಿರಬಹುದು," ಎಂದು ಅವರು ಹೇಳಿದರು.

Similar News