ಜ.31-ಫೆ.4: ಬೊಳ್ಳೂರಿನಲ್ಲಿ ರಿಫಾಯಿ ರಾತೀಬ್ ವಾರ್ಷಿಕ, ಧಾರ್ಮಿಕ ಪ್ರವಚನ ಕಾರ್ಯಕ್ರಮ

Update: 2023-01-28 07:30 GMT

ಮುಲ್ಕಿ, ಜ.28: ಇಲ್ಲಿನ ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್, ಲಿಯಾವುಲ್ ಇಸ್ಲಾಮ್ ದಫ್ ಕಮಿಟಿಯ 40ನೇ ವಾರ್ಷಿಕ ರಿಫಾಯಿ ದಫ್ ರಾತೀಬ್ ನೇರ್ಚೆ, ಧಾರ್ಮಿಕ ಮತ ಪ್ರವಚನ ಮತ್ತು ಕಥಾ ಪ್ರಸಂಗ ಕಾರ್ಯಕ್ರಮವು ಜ.31ರಿಂದ ಫೆಬ್ರವರಿ 4ರವರೆಗೆ ನಡೆಯಲಿದೆ.

ಜ:31ರಂದು ರಾತ್ರಿ 8ಕ್ಕೆ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಜರುಗಲಿದ್ದು, ಬೊಳ್ಳೂರು ಜುಮಾ ಮಸೀದಿಯ ಖತೀಬ್ ಶೈಖುನಾ ಅಲ್ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ಕಾರ್ಯಕ್ರಮ ಉದ್ಘಾಟಿಸುವರು. ಆರಿಫ್ ಬಾಖವಿ ಕೊಪ್ಪ ಪ್ರವಚನ ನೀಡುವರು. ಹಾಜಿ ಬಿ.ಎಚ್‌.ಅಬ್ದುಲ್ ಖಾದರ್ ಬೊಳ್ಳೂರು ಅಧ್ಯಕ್ಷತೆ ವಹಿಸುವರು.

ಫೆಬ್ರವರಿ 1ರಿಂದ 3ರವರೆಗೆ ಮನ್ನಾ‌ರ್ ಕಾಡ್‌ ಸಿ.ಕೆ.ಎಸ್.ಮೌಲವಿ ಮತ್ತು ಬಳಗದಿಂದ ಇಸ್ಲಾಮಿಕ್ ಕಥಾ ಪ್ರಸಂಗ ಜರುಗಲಿದೆ.

ಫೆ.4ರಂದು ಅಪರಾಹ್ನ 2ಕ್ಕೆ ರಿಫಾಯಿ ದಫ್ ರಾತೀಬ್ ಮಜ್ಲಿಸ್ ನಡೆಯಲಿದೆ. ರಾತ್ರಿ 8ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶೈಖುನಾ ಅಲ್ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ಉದ್ಘಾಟಿಸುವರು. ಸಮಸ್ತ ಕೇರಳ ಇಸ್ಲಾಮ್‌ ಮತ ವಿದ್ಯಾಭ್ಯಾಸ ಬೋರ್ಡ್‌ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಸೈಯದ್ ತ್ವಾಹಾ ಜಿಫ್ರಿ ತಂಙಳ್ ಪಿ.ಎಂ. ದುಆಗೆ ನೇತೃತ್ವ ವಹಿಸುವರು. ಆರಿಫ್ ಬಾಖವಿ ಕೊಪ್ಪ ಪ್ರಾಸ್ತಾವಿಕ ಭಾಷಣ ಮಾಡುವರು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಹುಸೈನಬ್ಬ ಬೊಳ್ಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News