ಬಲೂಚಿಸ್ತಾನದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ಬಸ್, ಕನಿಷ್ಠ 39 ಮಂದಿ ಮೃತ್ಯು: ವರದಿ

Update: 2023-01-29 06:42 GMT

ಇಸ್ಲಾಮಾಬಾದ್: ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ರವಿವಾರ ಬೆಳಗ್ಗೆ ಬಸ್ ವೊಂದು ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಕನಿಷ್ಠ 39 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

"ಬಸ್ ನಲ್ಲಿ  ಸುಮಾರು 48 ಪ್ರಯಾಣಿಕರಿದ್ದು. ಬಸ್  ಕ್ವೆಟ್ಟಾದಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು" ಎಂದು ಲಾಸ್ಬೆಲಾ ಸಹಾಯಕ ಕಮಿಷನರ್ ಹಂಝಾ ಅಂಜುಮ್ ಹೇಳಿದ್ದಾರೆಂದು ‘ದಿ ಡಾನ್’ ವರದಿ ಮಾಡಿದೆ.

"ವೇಗವಾಗಿ ಚಲಿಸುತ್ತಿದ್ದ ಬಸ್  ಲಾಸ್ಬೆಲಾ ಬಳಿ ಯು-ಟರ್ನ್ ತೆಗೆದುಕೊಳ್ಳುವಾಗ ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಬಸ್ ಸೇತುವೆಯಿಂದ ಕೆಳಗೆ ಬಿದ್ದು  ಬೆಂಕಿ ಹೊತ್ತಿಕೊಂಡಿತು. ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ ” ಎಂದು ಅವರು ಹೇಳಿದರು

ಮಗು ಹಾಗೂ  ಮಹಿಳೆ ಸೇರಿದಂತೆ ಮೂವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

Similar News