ದಾರುಲ್ ಇರ್ಶಾದ್: ಅಜ್ಮೀರ್ ಮೌಲಿದ್, 4ನೇ ಘಟಿಕೋತ್ಸವ

Update: 2023-01-30 14:34 GMT

ಬಂಟ್ವಾಳ, ಜ.30: ಮಾಣಿಯ ದಾರುಲ್ ಇರ್ಶಾದ್ ಸಂಸ್ಥೆಯ 33ನೇ ವಾರ್ಷಿಕೋತ್ಸವ, 4 ನೇ ಘಟಿಕೋತ್ಸವ, ಅಜ್ಮೀರ್ ಮೌಲಿದ್, ಏರ್ವಾಡಿ ಶುಹದಾ ನೇರ್ಚೆ ಮಿತ್ತೂರಿನ ಕೆಜಿಎನ್ ಕ್ಯಾಂಪಸ್‌ನಲ್ಲಿ ನಡೆಯಿತು‌.

ದ.ಕ ಜಿಲ್ಲಾ ಸಂಯುಕ್ತ ಜಮಾ‌ಅತ್‌ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನೆರವೇರಿಸಿದರು. ಕೇರಳ ಮುಸ್ಲಿಮ್ ಜಮಾ‌ಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಅಸ್ಸೈಯದ್ ಖಲೀಲ್ ಅಲ್ ಬುಖಾರಿ ಕಡಲುಂಡಿ ನೇತೃತ್ವ ವಹಿಸಿ, 'ಮುಈನಿ' ಮತ್ತು 'ಹಾಫಿಳ್' ಪದವೀಧರಿಗೆ ಪದವಿಪ್ರದಾನ ಮಾಡಿದರು.  ಉಡುಪಿ, ದ.ಕ., ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಜಮಾ‌ಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಕಾರ್ಯದರ್ಶಿ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣಗೈದರು. ಮೂಡುಬಿದಿರೆಯ ದ್ಸಿಕ್ರಾ ಅಕಾಡೆಮಿ ಸ್ಥಾಪಕ ನೌಫಲ್ ಸಖಾಫಿ ಕಳಸ, ಅಬೂಬಕರ್ ಸಖಾಫಿ ವೆಣ್ಣಕ್ಕೋಡ್ ಮಾತನಾಡಿದರು. ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾ‌ಅತ್ ನಾಇಬ್ ಖಾಝಿ ಅಬ್ದುರ್ರಹ್ಮಾನ್ ಬಾ‌ಅಲವಿ ಸಾದಾತ್ ತಂಙಳ್, ಕರ್ನಾಟಕ ಮುಸ್ಲಿಮ್ ಜಮಾ‌ಅತ್ ರಾಜ್ಯಾಧ್ಯಕ್ಷ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಕೆಜಿಎನ್ ದ‌ಅವಾ ಕಾಲೇಜಿನ ಪ್ರಾಂಶುಪಾಲರಾದ ಸೈಯದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್- ಅದನಿ ಉಪಸ್ಥಿತರಿದ್ದರು.

ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಉಪನ್ಯಾಸಕ ಹುಸೈನ್ ಅಹ್ಸನಿ ಅಲ್ ಮುಈನಿ ವಂದಿಸಿದರು.

Similar News