ಗೂಗಲ್‌ 12,000 ಸಿಬ್ಬಂದಿಗಳನ್ನು ವಜಾಗೊಳಿಸುವ ವಾರದ ಮುಂಚೆ CEO ಸುಂದರ್‌ ಪಿಚೈ ವೇತನದಲ್ಲಿ ಭಾರೀ ಏರಿಕೆ: ವರದಿ

Update: 2023-01-31 11:55 GMT

ಕ್ಯಾಲಿಫೋರ್ನಿಯಾ: ಕೆಲ ವಾರಗಳ ಹಿಂದೆ ಜಾಗತಿಕವಾಗಿ 12,000 ಉದ್ಯೋಗಗಳನ್ನು ಕಡಿತಗೊಳಿಸಿದ್ದ ಗೂಗಲ್ (Google) ಕ್ರಮವು ಹಲವರ ಅಚ್ಚರಿಗೆ ಕಾರಣವಾಗಿತ್ತು. ಈ ಸುದ್ದಿಯನ್ನು ಸ್ವತಃ ಪ್ರಕಟಿಸಿದ್ದ ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ (Sundar Pichai), ಅದರ ಹೊಣೆಯನ್ನೂ ತಾವೇ ಹೊತ್ತುಕೊಂಡಿದ್ದರು. ಈ ಕುರಿತು ಕಂಪನಿಯ ಎಲ್ಲ ಉದ್ಯೋಗಿಗಳಿಗೆ ಪತ್ರ ಬರೆದಿದ್ದ ಅವರು, ಈ ಕಠಿಣ ಪರಿಸ್ಥಿತಿಯಲ್ಲಿ ಎಲ್ಲ ಸಂತ್ರಸ್ತ ಉದ್ಯೋಗಿಗಳಿಗೆ ಕಂಪನಿಯು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದರು.

ಆದರೆ, ಉದ್ಯೋಗ ಕಡಿತಕ್ಕೂ ಮುಂಚೆಯೇ ಸುಂದರ್ ಪಿಚ್ಚೈ ಅವರಿಗೆ ಡಿಸೆಂಬರ್ ನ ವೇತನದಲ್ಲಿ ಭಾರಿ ಏರಿಕೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಇದರೊಂದಿಗೆ ಗೂಗಲ್ ಕಂಪನಿಯಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ಸಾಧ್ಯತೆ ಕುರಿತು ವರದಿಯಾಗಿದ್ದು, ಉದ್ಯೋಗಿಗಳ ಕಾರ್ಯವೈಖರಿಯ ಮೌಲ್ಯಮಾಪನವನ್ನು ಗೂಗಲ್ ಕಂಪನಿ ನಿಕಟವಾಗಿ ಮಾಡುತ್ತಿದೆ ಎಂದು indiatoday.in ವರದಿ ಮಾಡಿದೆ.

ಡಿಸೆಂಬರ್, 2022ರಲ್ಲಿ ಸುಂದರ್ ಪಿಚೈ ಅವರ ಉತ್ಕೃಷ್ಟ ಕಾರ್ಯನಿರ್ವಹಣೆಯನ್ನು ಗುರುತಿಸಲಾಗಿದ್ದು, ಅದಕ್ಕೆ ಬದಲಿಯಾಗಿ ಅವರಿಗೆ ಈಕ್ವಿಟಿ ಉಡುಗೊರೆ ನೀಡಲಾಗುತ್ತಿದೆ ಎಂದು ಗೂಗಲ್ ಪ್ರಕಟಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗೂಗಲ್ ಕಂಪನಿಯ ಮಾತೃ ಸಂಸ್ಥೆ ಆಲ್ಫಾಬೆಟ್ ಇಂಕ್, ಸುಂದರ್ ಪಿಚೈ ಅವರ ಕಾರ್ಯನಿರ್ವಹಣೆ ಸಂಗ್ರಹ ಮೊತ್ತವನ್ನು ಈ ಹಿಂದೆ 2019ರಲ್ಲಿದ್ದ ಶೇ. 43ರಿಂದ ಶೇ. 60ಕ್ಕೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ. ಈ ಸಂದರ್ಭದಲ್ಲಿ ವೇತನ ಏರಿಕೆಗೆ ಅಗತ್ಯ ಕಾರ್ಯನಿರ್ವಹಣೆಯನ್ನು ಪರಿಗಣಿಸಲಾಗಿದೆ ಎಂದೂ ಹೇಳಿದೆ. ಹೀಗಾಗಿ, ಸುಂದರ್ ಪಿಚೈ ಅವರ ವೇತನವು ಕಂಪನಿಯ ಕಾರ್ಯನಿರ್ವಹಣೆಯನ್ನು ಆಧರಿಸಿದಂತಾಗಿದೆ.

ಪ್ರತಿ ಮೂರು ವರ್ಷಕ್ಕೊಮ್ಮೆ ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಈಕ್ವಿಟಿ ಪರಿಹಾರ ಪಡೆಯುತ್ತಾರೆ. ಇದರನ್ವಯ, ಸುಂದರ್ ಪಿಚೈ ಅವರು ಎರಡು ಬಾರಿ 63 ದಶಲಕ್ಷ ಡಾಲರ್ ವಹಿವಾಟಿಗೆ ಸಮಾನ ಮೊತ್ತವಾದ ಕಾರ್ಯನಿರ್ವಹಣೆ ಸಂಗ್ರಹ ಮೊತ್ತ ಹಾಗೂ ಆಲ್ಫಾಬೆಟ್‌ನ ನಿರ್ಬಂಧಿತ ಸಂಗ್ರಹ ಮೊತ್ತದಲ್ಲಿ 84 ದಶಲಕ್ಷ ಡಾಲರ್ ಅನುದಾನ ಪಡೆದಿದ್ದಾರೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.

2018ರಲ್ಲಿ ತನ್ನ ವೇತನ ಮೊತ್ತವು ಸಮರ್ಪಕವಾಗಿದೆ ಎಂಬ ಕಾರಣ ನೀಡಿದ್ದ ಸುಂದರ್ ಪಿಚೈ, ಈಕ್ವಿಟಿ ಪರಿಹಾರವನ್ನು ನಿರಾಕರಿಸಿದ್ದರು.

ಇದನ್ನೂ ಓದಿ: ಫಾಝಿಲ್‌ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಸಿಗಲಿದೆ: ಶಾಸಕ ಡಾ. ಭರತ್ ಶೆಟ್ಟಿ

Similar News