ಮಂಗಳೂರು | ನೌಶಾದ್ ಹಾಜಿ ಸೂರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ

Update: 2023-02-01 09:30 GMT

ಮಂಗಳೂರು, ಜ.31: ಮರ್ಹೂಂ ನೌಶಾದ್ ಹಾಜಿ ಸೂರಲ್ಪಾಡಿಯ ಸ್ಮರಣಾರ್ಥ ನೌಶಾದ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಗಂಜಿಮಠದ ಝಾರಾ ಆಡಿಟೋರಿಯಂನಲ್ಲಿ ಸಲಹಾ ಸಮಿತಿಯ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಆಸೀಫ್ ಸೂರಲ್ಪಾಡಿ ಆದರ್ಶ್, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು, ಕೋಶಾಧಿಕಾರಿಯಾಗಿ ಮುಸ್ತಫಾ ಇಂಜಿನಿಯರ್ ಅಡ್ಡೂರು ದೆಮ್ಮಲೆ, ಉಪಾಧ್ಯಕ್ಷರಾಗಿ ಶಾಫಿ ಮೂಲರಪಟ್ನ, ಲತೀಫ್ ಗುರುಪುರ, ಆಸೀಫ್ ಫರಂಗಿಪೇಟೆ, ವರ್ಕಿಂಗ್ ಸೆಕ್ರೆಟರಿಯಾಗಿ ಅಬ್ದುಲ್ ಹಮೀದ್ ಕಣ್ಣೂರು, ಸಂಘಟನಾ ಕಾರ್ಯದರ್ಶಿಯಾಗಿ ಝಕರಿಯಾ ಫರ್ವೆಝ್, ಜೊತೆ ಕಾರ್ಯದರ್ಶಿಯಾಗಿ ಎಂ.ಎಸ್. ಸಾಲಿ ಮತ್ತು ಹಾಶಿರ್ ಫರಂಗಿಪೇಟೆ, ಮಾಧ್ಯಮ ಕಾರ್ಯದರ್ಶಿಯಾಗಿ ಇಮ್ರಾನ್ ಅಡ್ಡೂರು ಮತ್ತು ಸಲೀಂ ಮಲಿಕ್ ಫರಂಗಿಪೇಟೆ, ಕಾನೂನು ಸಲಹೆಗಾರರಾಗಿ ನ್ಯಾಯವಾದಿಗಳಾದ ಇಸಾಕ್ ಮತ್ತು ಹಬೀಬುರ್ರಹ್ಮಾನ್ ಬಿ.ಸಿ.ರೋಡ್, ಲೆಕ್ಕ ಪರಿಶೋಧಕರಾಗಿ ಯಾಸೀರ್ ಮೂಡುಬಿದಿರೆ ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಸಲಹಾ ಸಮಿತಿಯ ಸದಸ್ಯ ರಫೀಕ್ ಮಾಸ್ಟರ್ ನೇರವೇರಿಸಿದರು. ಸಲಹಾ ಸಮಿತಿಯ ಸದಸ್ಯರಾದ ಎಂ.ಎಚ್.ಮೊಯ್ದಿನ್ ಹಾಜಿ, ಮಾಜಿ ಮೇಯರ್ ಕೆ. ಅಶ್ರಫ್, ಉಸ್ಮಾನ್ ಏರ್‌ ಇಂಡಿಯಾ, ನೌಶಾದ್ ಹಾಜಿಯ ಸಹೋದರ ಅಬ್ದುಲ್ ಸತ್ತಾರ್ ಮತ್ತಿತರು ಉಪಸ್ಥಿತರಿದ್ದರು.

ಜೊತೆ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ವಂದಿಸಿದರು.

Similar News