ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್‌ ನಿಂದ 'ಹದೀಸ್ ಸೆಮಿನಾರ್‌'

Update: 2023-01-31 12:52 GMT

ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್‌ ಇದರ ಆಶ್ರಯದಲ್ಲಿ ಹದೀಸ್ ಸೆಮಿನಾರ್‌ ಮಂಗಳೂರಿನ ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕೇರಳದ ಜಾಮಿಯಾ ಅಲ್ ಹಿಂದ್ ಅರಬಿಕ್ ನ ಹದೀಸ್ ವಿಭಾಗದ ಮುಖ್ಯಸ್ಥ ಪ್ರೊ.ಅಬ್ದುಲ್ ಮಾಲಿಕ್ ಸಲಫಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದರು. 

ಮೌಲವಿ, ಅಬೂಬಕ್ಕರ್ ನಝೀರ್ ಸಲಫಿ ಸೆಮಿನಾರ್ ಉದ್ಘಾಟಿಸಿದರು.

ಮಾಲವಿ, ಶಿಹಾಬ್ ಎಡಕ್ಕ ಸಮಾರೋಪ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಅಲ್ ಬಯಾನ್ ಅರೆಬಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಮುಹಮ್ಮದ್ ಹಫೀಝ್, ಅಬ್ದುರಹ್ಮಾನ್ ಉಳ್ಳಾಲ್, ನಜ್‌ಮುದ್ದೀನ್ ಅಸ್ಸಾದಿ, ಅಬ್ದುಲ್ ಕಲಾಮ್ ಉಪಸ್ಥಿತರಿದ್ದರು. ಯಾಸರ್ ಆಲ್ ಹಿಕಮಿ ಸ್ವಾಗತಿಸಿದರು. ಖಲೀಲ್ ತಲಪಾಡಿ ಧನ್ಯವಾದಗೈದರು. ಇಜಾಝ್ ಸ್ವಲಾಹಿ ಕಾರ್ಯಕ್ರಮ ನಿರೂಪಿಸಿದರು.

Similar News