×
Ad

ಬಿಲ್ಲವ ಮುಖಂಡ ಕೆ.ತೇಜಪ್ಪ ಬಂಗೇರ ನಿಧನ

Update: 2023-01-31 20:07 IST

ಉಡುಪಿ: ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿವುಡುಪಿ ಇದರ ಸ್ಥಾಪಕ ವಿಶ್ವಸ್ತ ಕೆ. ತೇಜಪ್ಪ ಬಂಗೇರ (84) ಇವರು ಇಂದು ಬೆಳಗಿನಜಾವ 1:40ಕ್ಕೆ ನಿಧನರಾದರು.

ಮಟ್ಟು ಅಂಬಾಡಿಯ ನರ್ವ ಪೂಜಾರಿ ಹಾಗು ಕೊರಪಳು ಪೂಜಾರ್ತಿ ದಂಪತಿಯ ಮಗನಾಗಿ 1939ರಲ್ಲಿ ಜನಿಸಿದ ತೇಜಪ್ಪ ಬಂಗೇರ, ಎಸೆಸೆಲ್ಸಿ ವ್ಯಾಸಂಗದ ನಂತರ 1958ರಲ್ಲಿ ಮೀನುಗಾರಿಕಾ ಇಲಾಖೆಯಲ್ಲಿ ನೌಕರಿ ಪ್ರಾರಂಭಿಸಿ 1997ರಲ್ಲಿ ಸಬ್ ಪೋಸ್ಟ್‌ಮಾಸ್ಟರ್ ಆಗಿ ನಿವೃತ್ತರಾಗಿದ್ದರು.

ಆದಿಉಡುಪಿಯಲ್ಲಿ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸ್ಥಾಪಕ ವಿಶ್ವಸ್ತರಾದ ಇವರು ಸಂಸ್ಥೆಯ ಕಾರ್ಯದರ್ಶಿ, ಕಾರ್ಯ ನಿರ್ವಾಹಕ ವಿಶ್ವಸ್ತರಾಗಿ, ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಪೋಸ್ಟ್‌ಮ್ಯಾನ್ ಯೂನಿಯನ್ ಕಾರ್ಯದರ್ಶಿಯಾಗಿ, ಬಿಲ್ಲವರ ಸೇವಾ ಸಂಘ ಬನ್ನಂಜೆಯ ಕಾರ್ಯದರ್ಶಿ ಯಾಗಿ, ಆತ್ಮಾನಂದ ಸರಸ್ವತಿ ಐಟಿಐ ಬಿಲ್ಲಾಡಿ ಇದರ ಉಡುಪಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಯೋಗಾಭ್ಯಾಸದಲ್ಲಿ ವಿಶೇಷ ಪರಿಣಿತಿ ಪಡೆದಿದ್ದ ಇವರು, ಸಿದ್ದ ಸಮಾಧಿ ಯೋಗ ಬೆಂಗಳೂರು, ರವಿಶಂಕರ್ ಗುರೂಜಿ ಇವರ ಆರ್ಟ್ ಆಫ್ ಲಿವಿಂಗ್‌ನಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

Similar News