ಬಂಟ್ವಾಳ: ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿಯ 15 ನೇ ವಾರ್ಷಿಕ, 2 ನೇ ಸನದು ದಾನ ಮಹಾ ಸಮ್ಮೇಳನ ಪ್ರಚಾರ ಸಭೆ

Update: 2023-01-31 17:00 GMT

ಬಂಟ್ವಾಳ: ಕುಂಬಳೆ - ವಾದೀ ಸಲಾಮ್, ಬದ್ರಿಯಾ ನಗರದ ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿಯ 15 ನೇ ವಾರ್ಷಿಕ, 2 ನೇ ಸನದು ದಾನ ಮಹಾ ಸಮ್ಮೇಳನದ  ಪ್ರಚಾರ ಸಭೆಯು ಬಿ.ಸಿ.ರೋಡ್ ನ ಸಮಸ್ತ ಕಛೇರಿಯಲ್ಲಿ ಮಂಗಳವಾರ ನಡೆಯಿತು.

ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿಯ ಜನರಲ್ ಮೆನೇಜರ್, ಶೈಖುನಾ ಖಾಝಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಸಮಸ್ತ ಕೇಂದ್ರ ವಿದ್ಯಾಭ್ಯಾಸ ಬೋರ್ಡ್ ನ ಜನರಲ್ ಸೆಕ್ರೆಟರಿ ಮರ್ಹೂಮ್ ಶೈಖುನಾ ಖಾಸಿಂ ಉಸ್ತಾದ್ ರವರು ಸ್ಥಾಪಿಸಿದ ಈ ಸಂಸ್ಥೆಯನ್ನು ಅವರ ಇಚ್ಛೆಯಂತೆ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಜುನೈನತುಲ್ ಉಲಮಾ ಶೈಖುನಾ ಬಂಬ್ರಾಣ ಉಸ್ತಾದ್ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ, ವಿಟ್ಲ - ಪರ್ತಿಪಾಡಿ ಜುಮಾ ಮಸೀದಿ ಮುದರ್ರಿಸ್ ಅಬ್ದುರ್ರಹ್ಮಾನ್ ಫೈಝಿ ಬಜಾಲ್ ಉದ್ಘಾಟಿಸಿದರು. 

ಉನೈಸ್ ಫೈಝಿ ಕೂರ್ನಡ್ಕ, ಶಾಫಿ ದಾರಿಮಿ ಅಜ್ಜಾವರ, ಶಫೀಕ್ ಕೌಸರಿ ಕುಕ್ಕಾಜೆ, ಹನೀಫ್ ಫೈಝಿ ಅಸೈಗೋಳಿ, ಜಬ್ಬಾರ್ ಫೈಝಿ ಪಾತೂರು, ಅಬ್ದುಸ್ಸಮದ್ ಹಿಂದಾದಿ, ಶರೀಫ್ ಮುಸ್ಲಿಯಾರ್ ಕುಂತೂರು ಮೊದಲಾದವರು ಉಪಸ್ಥಿತರಿದ್ದರು.

ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿಯ ಅಲಿ ದಾರಿಮಿ ಕಿನ್ಯ ಪ್ರಸ್ತಾವನೆ ಗೈದರು. ಜುನೈನತುಲ್ ಉಲಮಾ ಶೈಖುನಾ ಬಂಬ್ರಾಣ ಉಸ್ತಾದ್ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ರಿಯಾಝ್ ಫೈಝಿ ಎರ್ಮಾಡ್ ಸ್ವಾಗತಿಸಿ, ಉಪಾಧ್ಯಕ್ಷ ಅಬ್ದುಲ್ ಗಫೂರ್ ಫಾಝಿಲ್ ಹನೀಫಿ ವಂದಿಸಿದರು.

Similar News