747 ಜಂಬೊಜೆಟ್ ಗೆ ವಿದಾಯ ಹೇಳಿದ ಬೋಯಿಂಗ್

Update: 2023-01-31 17:06 GMT

ವಾಷಿಂಗ್ಟನ್, ಜ.31: ಬೋಯಿಂಗ್ ವಿಮಾನಸಂಸ್ಥೆಯ ಪ್ರತಿಷ್ಟಿತ  747 ಜಂಬೊಜೆಟ್ ವಿಮಾನಕ್ಕೆ ಅಂತಿಮ ವಿದಾಯ ಹೇಳಲಾಗಿದ್ದು ಮಂಗಳವಾರ ವಾಣಿಜ್ಯ ವಿಮಾನದ ಅಂತಿಮ ವಿತರಣೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ಅಟ್ಲಾಸ್ ಏರ್ಸಂಸ್ಥೆಗೆ ಅಂತಿಮ 747-8 ಸರಕು ವಿಮಾನದ  ವಿತರಣೆಯ ಸಮಾರಂಭ ಅಮೆರಿಕದ ವಾಯವ್ಯದ ನಗರ ಎವರೆಟ್ನಲ್ಲಿರುವ ಬೋಯಿಂಗ್ ಫ್ಯಾಕ್ಟರಿಯಲ್ಲಿ ನಡೆಯಲಿದ್ದು ವಿಶ್ವಪ್ರಸಿದ್ಧ ಸಂಸ್ಥೆಯ ಸಾವಿರಾರು ಹಾಲಿ ಮತ್ತು ಮಾಜಿ ಉದ್ಯೋಗಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಅಸ್ತಿತ್ವದಲ್ಲಿರುವ ಬೋಯಿಂಗ್ ವಿಮಾನಗಳ ಸಮೂಹವು ಇನ್ನೂ ಒಂದು ದಶಕ ಸೇವೆ ಸಲ್ಲಿಸಲಿದೆ. ಆದರೆ 747 ಜಂಬೊಜೆಟ್ ವಿಮಾನಗಳ ಉತ್ಪಾದನೆ ಸ್ಥಗಿತಗೊಳ್ಳಲಿದೆ. ಇದರೊಂದಿಗೆ ನಾಗರಿಕ ವಿಮಾನಯಾನ ಇತಿಹಾಸದಲ್ಲಿ ಒಂದು ಅಧ್ಯಾಯ ಸಮಾಪ್ತಿಗೊಳ್ಳಲಿದೆ. ವಿಮಾನದ ಗಾತ್ರ, ಹಾರುವ ವ್ಯಾಪ್ತಿ ಮತ್ತು ಸಾಮಥ್ರ್ಯವು 1970ರ ದಶಕದ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲೂ ಮಧ್ಯಮ ವರ್ಗದ ಜನರಿಗೆ ಯುರೋಪ್ ಮತ್ತು ಅಮೆರಿಕದ ಹೊರಗೆ ಕೈಗೆಟಕುವ ದರದಲ್ಲಿ ವಿಮಾನ ಪ್ರಯಾಣ ನಡೆಸಲು ಸಾಧ್ಯವಾಗಿಸಿತ್ತು. 

ಇದು ಜಗತ್ತನ್ನು ತೆರೆಯಿತು  ಎಂದು ಏರೋಸ್ಪೇಸ್ ಮತ್ತು ರಕ್ಷಣಾ ಇಲಾಖೆಯ ನಿರ್ದೇಶಕ ಮೈಕೆಲ್ ಮೆರ್ಲುಜಿಯೊ ಹೇಳಿದ್ದಾರೆ. 

Similar News