×
Ad

ಮುಂದುವರಿದ ರಾಜಿನಾಮೆ ಪರ್ವ: NDTVಯಿಂದ ಹೊರನಡೆದ ಕವಲ್‌ಜಿತ್‌ ಸಿಂಗ್‌ ಬೇಡಿ

Update: 2023-01-31 23:40 IST

ಹೊಸದಿಲ್ಲಿ: ಎನ್‌ಡಿಟಿವಿ (NDTV) ಮಾಧ್ಯಮ ಸಂಸ್ಥೆಯನ್ನು ಅದಾನಿ ಸಮೂಹವು ಎನ್‌ಡಿಟಿವಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಸಂಸ್ಥೆಗೆ ರಾಜೀನಾಮೆ ನೀಡುತ್ತಿರುವ ಪತ್ರಕರ್ತರ ಸಾಲಿಗೆ ಹಿರಿಯ ಪತ್ರಕರ್ತ ಕವಲ್‌ಜಿತ್‌ ಸಿಂಗ್‌ ಬೇಡಿ ಕೂಡಾ ಸೇರಿದ್ದಾರೆ. 

ಎನ್‌ಡಿಟಿವಿಯಲ್ಲಿ ಮುಖ್ಯ ತಂತ್ರಜ್ಞಾನ ಮತ್ತು ಉತ್ಪನ್ನ ಅಧಿಕಾರಿ ಕವಲ್‌ಜಿತ್‌ ಸಿಂಗ್‌ ಬೇಡಿ ಸಂಸ್ಥೆಯಿಂದ ಹೊರನಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಸುದೀರ್ಘ 23 ವರ್ಷಗಳ ಸೇವೆಗಳ ಬಳಿಕ ಎನ್‌ಡಿಟಿವಯನ್ನು ತೊರೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇಂದು ಖ್ಯಾತ ಪತ್ರಕರ್ತೆ ಹಾಗೂ ಸುದ್ದಿ ನಿರೂಪಕಿ ನಿಧಿ ಅವರೂ ಎನ್‌ಡಿಟಿವಿ ರಾಜೀನಾಮೆ ನೀಡಿದ್ದರು.

ಡಿಸೆಂಬರ್‌ನಲ್ಲಿ ಕಂಪನಿಯ ಬೋರ್ಡ್‌ನಿಂದ ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಹೊರಬಂದ ನಂತರ ಖ್ಯಾತ ಸುದ್ದಿ ನಿರೂಪಕ ರವೀಶ್‌ ಕುಮಾರ್‌ ರಾಜೀನಾಮೆ ನೀಡಿದ್ದರು.

Similar News