‌ಇನ್ನಷ್ಟು ಉದ್ಯೋಗ ಕಡಿತದ ಸುಳಿವು ನೀಡಿದ ಮೆಟಾ

Update: 2023-02-02 09:56 GMT

ಕ್ಯಾಲಿಫೋರ್ನಿಯಾ: ದೊಡ್ಡ ತಂತ್ರಜ್ಞಾನ ಕಂಪೆನಿಗಳು ಉದ್ಯೋಗ ಪ್ರಕ್ರಿಯೆಯಿಂದಾಗಿ ಈಗಾಗಲೇ ಸಾವಿರಾರು ಟೆಕ್ಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಈ ನಡುವೆ ಫೇಸ್ಬುಕ್‌ ಮಾತೃ ಸಂಸ್ಥೆ ಮೆಟಾ (Meta) ಸಿಇಒ ಮಾರ್ಕ್ ಝುಕರ್ ಬರ್ಗ್‌ ತಮ್ಮ ಸಂಸ್ಥೆಯಲ್ಲಿ ಇನ್ನೊಂದು ಸುತ್ತಿನ ಲೇಆಫ್‌ಗಳು ನಡೆಯಲಿವೆ ಎಂದು ದೃಢೀಕರಿಸಿದ್ದಾರೆ.

2023 ರನ್ನು ದಕ್ಷತೆಯ ವರ್ಷವನ್ನಾಗಿಸುವ ತಮ್ಮ ಉದ್ದೇಶವನ್ನು ಸಂಸ್ಥೆಯ ಆಂತರಿಕ ಸಭೆಯೊಂದರಲ್ಲಿ ತಿಳಿಸಿದ ಝುಕರ್ ಬರ್ಗ್‌, ಅದೇ ಸಮಯ ಕಂಪೆನಿಯ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆಗೆ ವೇಗ ನೀಡಲು ಹಾಗೂ ಮಧ್ಯಮ ಹಂತದ  ಕೆಲವೊಂದು ಹುದ್ದೆಗಳನ್ನು ಕೈಬಿಡಲಾಗುವುದೆಂಬುದರ ಸುಳಿವು ನೀಡಿದ್ದಾರೆ.

ಕಳೆದೆರಡು ದಶಕಗಳಲ್ಲಿ ಕಂಪೆನಿಯ ಉದ್ಯೋಗಿಗಳ ಸಂಖ್ಯೆಯಲ್ಲಿ ತುಂಬಾ ಹೆಚ್ಚಾಗಿದೆ ಹಾಗೂ ಅಷ್ಟು ಪ್ರಗತಿ ಸಾಧಿಸುವಾಗ ದಕ್ಷತೆಯನ್ನೂ ಕಾಪಾಡುವುದು ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೆಟಾ ಸಂಸ್ಥೆ ನವೆಂಬರ್‌ 2022 ರಲ್ಲಿ 11,000 ಉದ್ಯೋಗಿಗಳನ್ನು ಕೈಬಿಡುವ ನಿರ್ಧಾರ ಕೈಗೊಂಡು ತನ್ನ 11 ಶೇಕಡಾ ಉದ್ಯೋಗಿಗಳ ಸಂಖ್ಯೆ ಕಡಿಮೆಗೊಳಿಸಿತ್ತು.

Similar News