ಮಂಗಳೂರು | ಕರಾವಳಿ ಕಾವಲು ಪಡೆಯ 47ನೇ ದಿನಾಚರಣೆ: ರಾಜ್ಯಪಾಲ ಗೆಹ್ಲೋಟ್ ಭಾಗಿ

Update: 2023-02-02 10:37 GMT

ಮಂಗಳೂರು, ಫೆ.2: ಕರಾವಳಿ ಕಾವಲು ಪಡೆಯ 47ನೇ ಸಂಸ್ಥಾಪನಾ ದಿನಾಚರಣೆಯು ನವ ಮಂಗಳೂರು ಬಂದರ್ ನಲ್ಲಿಂದು  ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  ಇನ್ ಸ್ಪೆಕ್ಟರ್ ಜನರಲ್ ಎಂ.ವಿ.ಬಾಡ್ಕರ್ (ಟೀಮ್  ಕಮಾಂಡರ್, ಕೋಸ್ಟ್ ಗಾರ್ಡ್ ಪ್ರದೇಶ (ಪಶ್ಚಿಮ) ) ಅವರ ಜೊತೆ ಕರ್ನಾಟಕದಲ್ಲಿ ಕೋಸ್ಟ್ ಗಾರ್ಡ್ ಕಾರ್ಯಾಚರಣೆಗಳು ಮತ್ತು ಚಟುವಟಿಕೆಗಳನ್ನು ರಾಜ್ಯಪಾಲರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ರಾಜ್ಯಪಾಲರು ಕಡಲ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು. ಜನವಸತಿ ಮತ್ತು ಜನವಸತಿ ಇಲ್ಲದ ದ್ವೀಪಗಳ ಕರಾವಳಿ ಭದ್ರತೆಯ ಅಗತ್ಯತೆಗಳು, ಕೋಸ್ಟ್ ಗಾರ್ಡ್ ಪಾಲು ಮತ್ತು ಸಮುದ್ರದಲ್ಲಿ ನಾವಿಕರು ಮತ್ತು ಮೀನುಗಾರರ ಸುರಕ್ಷತೆ ಮತ್ತು ಸುರಕ್ಷತೆಯ ಜವಾಬ್ದಾರಿ, ಪರಸ್ಪರ ಕಾರ್ಯಸಾಧ್ಯತೆ ಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಕೋಸ್ಟ್ ಗಾರ್ಡ್ ಹೆಡ್ ಕ್ವಾರ್ಟರ್ಸ್ ನಂ.3ರ ಕಾರ್ಯಾಚರಣಾ ಮೂಲಸೌಕರ್ಯವನ್ನು ರಾಜ್ಯಪಾಲರು ಪರಿಶೀಲಿಸಿದರು. ಈ ವೇಳೆ ಕೋಸ್ಟ್ ಗಾರ್ಡ್‌ನ ಕಣ್ಗಾವಲು ಸೌಲಭ್ಯಗಳು ಮತ್ತು ಕಾರ್ಯಾಚರಣೆಯ ದಕ್ಷತೆಯ ಬಗ್ಗೆ ಉಪ ಮಹಾನಿರೀಕ್ಷಕ ಪ್ರವೀಣ್ ಕುಮಾರ್ ಮಿಶ್ರಾ(ಟೀಮ್ ಕಮಾಂಡರ್ ಕರ್ನಾಟಕ) ಮಾಹಿತಿ ನೀಡಿದರು.

ಕೋಸ್ಟಲ್ ಸೆಕ್ಯುರಿಟಿ ಮ್ಯಾಟ್ರಿಕ್ಸ್ ಅನ್ನು ಬಲಪಡಿಸಲು ಪ್ರಗತಿಯಲ್ಲಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳ ಬಗ್ಗೆ ರಾಜ್ಯ ಪಾಲರು ಚೈನ್ ಆಫ್ ಸ್ಟ್ಯಾಟಿಕ್ ಸೆನ್ಸರ್ಸ್ ಯೋಜನೆಯ IIನೇ ಹಂತಕ್ಕೆ ಒತ್ತು ನೀಡುವ ಬಗ್ಗೆ ಸೂಚಿಸಿದರು. ಕಮಾಂಡರ್ ಅವರು ಸಮುದ್ರದಲ್ಲಿ ಕಾರ್ಯಾಚರಣೆಯ ಪ್ರದರ್ಶನ ಘಟಕಗಳ ಸಮಯದಲ್ಲಿ ಕರ್ತವ್ಯಗಳ ಬಗ್ಗೆ ವಿವರಿಸಿದರು.

ಸಮುದ್ರದಲ್ಲಿ ಶೋಧ ಕಾರ್ಯ ಮತ್ತು ಪಹರೆ, ವಿರೋಧಿಗಳ ಚಟುವಟಿಕೆ ಮೇಲೆ ನಿಗಾ, ಪತ್ತೆ ಕಾರ್ಯ, ವೈದ್ಯಕೀಯ ತುರ್ತು ಅಗತ್ಯ ಇರುವ ನಾವಿಕರನ್ನು ದಡಕ್ಕೆ ತಲುಪಿಸುವುದು ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ಪ್ರದರ್ಶಿಸಲಾಯಿತು. ಸಮುದಾಯ ಸಂವಹನ ಕಾರ್ಯಕ್ರಮಗಳ ವಿವಿಧ ಹಂತಗಳನ್ನು ರಾಜ್ಯಪಾಲರು ಮೌಲ್ಯಮಾಪನ ಮಾಡಿದರು.

ಆಝಾದಿ ಕಾ ಅಮೃತ್ ಮಹೋತ್ಸವ, ಪುನೀತ್ ಸಾಗರ್ ಅಭಿಯಾನ, ಸ್ವಚ್ಛ ಭಾರತ್ ಅಭಿಯಾನ ಮುಂತಾದ ವಿವಿಧ ಸರಕಾರಿ ಅಭಿಯಾನಗಳಿಗಾಗಿ ಕೈಗೊಂಡ ಚಟುವಟಿಕೆಗಳ ಬಗ್ಗೆ( ಸಿಜಿ )ಘಟಕಗಳು ನಡೆಸಿದ ಪ್ರದರ್ಶನಗಳನ್ನು ರಾಜ್ಯಪಾಲರು ಶ್ಲಾಘಿಸಿದರು ಮತ್ತು ಸಮುದ್ರದಲ್ಲಿ ಸಿಜಿ ಹಡಗುಗಳ ಕಾರ್ಯಾಚರಣೆಯ ಸಾಮರ್ಥ್ಯದ ಮೆಚ್ಚುಗೆ ವ್ಯಕ್ತಪಡಿಸಿದರು.

Similar News