ಮಂಗಳೂರು: 'ಕಂದಕ್ ಗಲ್ಲಿ ಪ್ರೀಮಿಯರ್ ಲೀಗ್' ನ ಎರಡನೇ ಸೀಸನ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

Update: 2023-02-03 18:33 GMT

ಮಂಗಳೂರು: 'ಕಂದಕ್ ಗಲ್ಲಿ ಪ್ರೀಮಿಯರ್ ಲೀಗ್' ನ ಎರಡನೇ ಸೀಸನ್ ಕ್ರಿಕೆಟ್ ಪಂದ್ಯಾವಳಿ ಶುಕ್ರವಾರ ಸಂಜೆ ಆರಂಭಗೊಂಡಿದೆ.

ದಿವಂಗತ ಸರೋಜಿನಿ ಪುಂಡಲೀಕ ಬೆಂಗ್ರೆ ಅವರ ಸ್ಮರಣಾರ್ಥ ಈ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. 
 
ಬಳಿಕ ಮಾತನಾಡಿದ ಅವರು, ಲೀಗ್‌ನಲ್ಲಿ ಎಲ್ಲಾ ಸಮುದಾಯದ ಜನರು ಭಾಗವಹಿಸಿ ಆಡುವುದರಿಂದ ಈ ಪಂದ್ಯಾವಳಿಯು ಕೋಮು ಸೌಹಾರ್ದತೆ ಮತ್ತು ಸಹೋದರತ್ವಕ್ಕೆ ನಾಂದಿ ಹಾಡುತ್ತದೆ' ಎಂದರು. 

ಫೆ.3 ರಿಂದ 12 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಸುಮಾರು 11 (7 ಜೂನಿಯರ್ ಮತ್ತು 4 ಸೀನಿಯರ್) ತಂಡಗಳು ಭಾಗವಹಿಸಲಿವೆ.

ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ ಲತೀಫ್ ಕಂದಕ್, 'ಇದು ಪಂದ್ಯಾವಳಿಯ ಎರಡನೇ ಸೀಸನ್ ಆಗಿದ್ದು, ವಿವಿಧ ಸಮುದಾಯಗಳಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಉತ್ತೇಜಿಸಲು ನಾವು ಇದನ್ನು ಆಯೋಜಿಸುತ್ತೇವೆ. ಕಂದಕ್‌ನಲ್ಲಿ ವಾಸಿಸುವ ವಿವಿಧ ಸಮುದಾಯಗಳ ಜನರು ಈ ವರ್ಷ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ' ಎಂದು ಅವರು ಹೇಳಿದರು.

Similar News