ಲ್ಯಾಟಿನ್ ಅಮೆರಿಕದಲ್ಲಿ 2ನೇ ಚೀನಿ ಬಲೂನ್ ಪತ್ತೆ

Update: 2023-02-04 11:29 GMT

ವಾಷಿಂಗ್ಟನ್: ಅಮೆರಿಕದ ವಾಯುಪ್ರದೇಶದಲ್ಲಿ ಚೀನಾದ ಬೇಹುಗಾರಿಕೆ ಬಲೂನ್ (Chinese balloon) ಪತ್ತೆಯಾಗಿದೆ ಎಂಬ ವರದಿಗಳ ಬೆನ್ನಲ್ಲೇ ಲ್ಯಾಟಿನ್ ಅಮೆರಿಕದಲ್ಲಿ (Latin America) ಶುಕ್ರವಾರ ರಾತ್ರಿ ಚೀನಾದ ಬಲೂನ್ ಪತ್ತೆಯಾಗಿದೆ ಎಂದು ಪೆಂಟಗಾನ್ ಪ್ರಕಟಿಸಿದೆ.

"ಲ್ಯಾಟಿನ್ ಅಮೆರಿಕಕ್ಕೆ ಬಲೂನ್ ವರ್ಗಾವಣೆಯಾಗುತ್ತಿರುವ ವರದಿಗಳನ್ನು ನಾವು ನೋಡಿದ್ದೇವೆ. ಇದು ಚೀನಾದ ಮತ್ತೊಂದು ಕಣ್ಗಾವಲು ಬಲೂನ್ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ" ಎಂದು ಪೆಂಟಗಾನ್ ವ್ಯಕಾತ ಪ್ಯಾಟ್ ರೈಡರ್ ಹೇಳಿದ್ದಾರೆ. ಆದರೆ ಬಲೂನ್‍ನ ನಿಖರವಾದ ಸ್ಥಳವನ್ನು ಅವರು ಬಹಿರಂಗಪಡಿಸಿಲ್ಲ.

ಚೀನಾ ವಿಷಾದ: ಅಮೆರಿಕದ ವಾಯುಪ್ರದೇಶದಲ್ಲಿ ಹಾರಾಡಿದ ಬಲೂನ್, ನಾಗರಿಕ ಹವಾಮಾನ ಮುನ್ಸೂಚನೆ ಮತ್ತು ಇತರ ವೈಜ್ಞಾನಿಕ ಉದ್ದೇಶಗಳಿಗೆ ಸಿದ್ಧಪಡಿಸಲಾದ ಆಕಾಶನೌಕೆ ಎಂದು ಚೀನಾ ಸ್ಪಷ್ಟಪಡಿಸಿದೆ. ಜತೆಗೆ ಇದು ಅಮೆರಿಕ ವಾಯುಪ್ರದೇಶದಲ್ಲಿ ಸಂಚರಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.

ಈ ಅನಿರೀಕ್ಷಿತ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಅಮೆರಿಕದ ಜತೆ ನಿರಂತರ ಸಂಪರ್ಕದಲ್ಲಿ ಚೀನಿ ಅಧಿಕಾರಿಗಳು ಇದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

ಇದನ್ನೂ ಓದಿ: ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಗಾಯಕಿ ವಾಣಿ ಜಯರಾಂ

Similar News