16 ವರ್ಷದಿಂದ ತಲೆಮರೆಸಿಕೊಂಡಿದ್ದ ಕ್ರಿಮಿನಲ್ ಫ್ರಾನ್ಸ್ ನಲ್ಲಿ ಬಂಧನ

Update: 2023-02-04 17:28 GMT

ಪ್ಯಾರಿಸ್, ಫೆ.5: ಇಟಲಿಯ ಕುಖ್ಯಾತ ಮಾಫಿಯಾ ಗ್ಯಾಂಗ್ ನ ಸದಸ್ಯನಾಗಿದ್ದ, ಕೊಲೆ ಪ್ರಕರಣದಲ್ಲಿ ಅಪರಾಧಿಯೆಂದು ಪರಿಗಣಿಸಲ್ಪಟ್ಟಿದ್ದ ಇಟಲಿ ಪ್ರಜೆ ಎಡ್ಗಾರ್ಡೊ  ಗ್ರೆಕೊನನ್ನು ಫ್ರಾನ್ಸ್ ನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.

ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಈತ ಫ್ರಾನ್ಸ್ ನ  ಆಲ್ಪ್ ನ ಪ್ರದೇಶದ ಸೈಂಟ್ ಎಟಿಯೆನ್ನಲ್ಲಿ ಪಿಝಾ ರೆಸ್ಟಾರೆಂಟ್ ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಾ ಕಳೆದ 16 ವರ್ಷಗಳಿಂದ ಬಂಧನದಿಂದ ತಪ್ಪಿಸಿಕೊಂಡಿದ್ದ. 2006ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಈತ 2014ರವರೆಗೆ ತಲೆಮರೆಸಿಕೊಂಡಿದ್ದ. ಬಳಿಕ ಫ್ರಾನ್ಸ್ ನ ವಿವಿಧ ರೆಸ್ಟಾರೆಂಟ್ ಗಳಲ್ಲಿ ಬಾಣಸಿಗನಾಗಿ ಕೆಲಸ ಮಾಡಿದ್ದು ನಂತರ ಸ್ವಂತ ರೆಸ್ಟಾರೆಂಟ್ ಆರಂಭಿಸಿದ್ದ. ಹಲವು ಟಿವಿ ಚಾನೆಲ್‌ಗಳು ಅಡುಗೆ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಪಾಲ್ಗೊಂಡು ಜನಪ್ರಿಯತೆ ಗಳಿಸಿದ್ದ ಎಂದು ವರದಿಯಾಗಿದೆ.

ಇಟಲಿಯ ಅತ್ಯಂತ ಅಪಾಯಕಾರಿ ಮಾಫಿಯಾ ಗ್ಯಾಂಗ್ `ಎಂಡ್ರಾಂಘೆಟ'ದ ಜತೆ ಸಂಪರ್ಕ ಹೊಂದಿದ್ದ ಗ್ರೆಕೊ 2006ರಲ್ಲಿ ವಿರೋಧಿ ಗುಂಪಿನ ಇಬ್ಬರನ್ನು ಹತ್ಯೆ ಮಾಡಿ, ಅವರ ಮೃತದೇಹವನ್ನು ಆ್ಯಸಿಡ್ ಟ್ಯಾಂಕ್ ನಲ್ಲಿ ಹಾಕಿ ಕರಗಿಸಿದ್ದ. ಈ ಪ್ರಕರಣದಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ್ದ ಗ್ರೆಕೊ ಜೈಲಿನಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

Similar News