ತೊಕ್ಕೊಟ್ಟು: ಮೀನು ತ್ಯಾಜ್ಯ ಸಾಗಾಟದ ಟೆಂಪೊ ಪಲ್ಟಿ

Update: 2023-02-05 06:22 GMT

ಮಂಗಳೂರು, ಫೆ.5: ಮೀನಿನ ತ್ಯಾಜ್ಯ ಸಾಗಾಟ ಮಾಡುತ್ತಿದ್ದ ಟೆಂಪೊವೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದ ಘಟನೆ ನಗರ ಹೊರ ವಲಯದ ಕಲ್ಲಾಪು ಬಳಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಇಂದು ಬೆಳಗ್ಗೆ 10:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮಂಗಳೂರು ದಕ್ಕೆಯಿಂದ ಮೀನು ತ್ಯಾಜ್ಯವನ್ನು ಹೇರಿಕೊಂಡು  ಉಳ್ಳಾಲದತ್ತ ಸಂಚರಿಸುತ್ತಿದ್ದ ಟೆಂಪೊ ಕಲ್ಲಾಪುವಿನ ಗ್ಲೋಬಲ್ ಮಾರ್ಕೆಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಈ ಟೆಂಪೊ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತದಿಂದ ರಸ್ತೆಯಲ್ಲಿ ಮೀನು ತ್ಯಾಜ್ಯ ಚೆಲ್ಲಿತ್ತು. ಕೆಲಹೊತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿತ್ತು.

Similar News