ಆಸ್ಟ್ರೇಲಿಯದ ಟಿ-20 ವಿಶ್ವಕಪ್ ವಿಜೇತ ನಾಯಕ ಆ್ಯರೊನ್ ಫಿಂಚ್ ಅಂತರ್ ರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿ

Update: 2023-02-07 06:31 GMT

ಮೆಲ್ಬೋರ್ನ್: ಆಸ್ಟ್ರೇಲಿಯ  ತಂಡ  ಮೊದಲ ಬಾರಿ ಐಸಿಸಿ ಪುರುಷರ ಟಿ-20 ವಿಶ್ವಕಪ್ ಪ್ರಶಸ್ತಿ ಗೆಲ್ಲಲು  ಕಾರಣರಾಗಿರುವ ಆ್ಯರೊನ್  ಫಿಂಚ್ ಮಂಗಳವಾರ ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.

ಫಿಂಚ್  ಆಸ್ಟ್ರೇಲಿಯವನ್ನು ಎಲ್ಲ ಮಾದರಿ ಕ್ರಿಕೆಟ್ ನಲ್ಲಿ 254 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ(5 ಟೆಸ್ಟ್, 146 ಏಕದಿನ ಹಾಗೂ 103 ಟಿ-20)ಪ್ರತಿನಿಧಿಸಿದ್ದಾರೆ.

76 ಟಿ-20 ಹಾಗೂ 55 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ನಾಯಕನಾಗಿ ಮುನ್ನಡೆಸಿದ್ದಾರೆ.

 ಮಾಜಿ ಏಕದಿನ ನಾಯಕ ಫಿಂಚ್  ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 50-ಓವರ್ ಮಾದರಿ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು.  ಆಸ್ಟ್ರೇಲಿಯ ವಿಶ್ವಕಪ್ ಸೆಮಿ-ಫೈನಲ್‌ಗೆ ಮುಂಚೆಯೇ  ಸೋತ ನಂತರ ಫಿಂಚ್ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದರು.

2011ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20ಯಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಾಲಿಟ್ಟ ಫಿಂಚ್ ಏಕದಿನ ಕ್ರಿಕೆಟ್ ನಲ್ಲಿ 17 ಶತಕ ಹಾಗೂ ಟಿ-20ಯಲ್ಲಿ 2 ಶತಕ ಸೇರಿದಂತೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 8,804 ರನ್ ಗಳಿಸಿದ್ದಾರೆ.

2018ರಲ್ಲಿ ಹರಾರೆಯಲ್ಲಿ ಝಿಂಬಾಬ್ವೆ ವಿರುದ್ಧ 172 ರನ್ ಗಳಿಸಿದ್ದ ಫಿಂಚ್ ಟಿ-20 ಕ್ರಿಕೆಟ್ ನಲ್ಲಿ ಗರಿಷ್ಟ ಸ್ಕೋರ್ ಗಳಿಸಿದ್ದಾರೆ.

36 ವರ್ಷ ವಯಸ್ಸಿನ, ಆರಂಭಿಕ ಬ್ಯಾಟ್ಸ್‌ಮನ್ ಹಾಗೂ  ಚಾಣಾಕ್ಷ ನಾಯಕ ಫಿಂಚ್ ಆಸ್ಟ್ರೇಲಿಯದ  ಶ್ರೇಷ್ಠ ಸೀಮಿತ-ಓವರ್‌ಗಳ ಆಟಗಾರರಲ್ಲಿ ಪೈಕಿ ಒಬ್ಬರಾಗಿದ್ದಾರೆ. 2021 ರಲ್ಲಿ ಯುಎಇನಲ್ಲಿ ಆಸ್ಟ್ರೇಲಿಯ ತನ್ನ ಮೊದಲ ಜಾಗತಿಕ ಟಿ-20 ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ತನ್ನ ತವರು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಉತ್ತರಾಧಿಕಾರಿ ಗುರುತಿಸಲು ಇದು ಸಮಯ ಎಂದು ಫಿಂಚ್ ಹೇಳಿದರು.

Similar News