ಸಂಚಾರ ನಿಯಮ ಉಲ್ಲಂಘನೆ: 1,880 ಪ್ರಕರಣಗಳ ದಂಡ ವಸೂಲಿ

Update: 2023-02-07 17:04 GMT

ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಸೂಚನೆಯಂತೆ ದಂಡ ಶುಲ್ಕದಲ್ಲಿ ಶೇ.50 ರಿಯಾಯ್ತಿಯಡಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಂಗಳವಾರ 1,880 ಪ್ರಕರಣಗಳಲ್ಲಿ 4,49,950 ರೂ. ಶುಲ್ಕ ವಸೂಲಿ ಮಾಡಲಾಗಿದೆ.
ಇ ಚಲನ್‌ನಲ್ಲಿ 1,789 ಪ್ರಕರಣಗಳಲ್ಲಿ 4,18,350 ರೂ., ಸ್ಥಳದಲ್ಲೇ ದಂಡದ 91 ಪ್ರಕರಣಗಳಲ್ಲಿ 31,600 ರೂ. ಶುಲ್ಕ ವಸೂಲಿ ಮಾಡಲಾಗಿದೆ.

ಸಂಚಾರ ಪೂರ್ವ ಠಾಣೆಯಲ್ಲಿ ಇ ಚಲನ್‌ನಡಿ 578 ಪ್ರಕರಣಗಳಲ್ಲಿ 1,25,750 ರೂ., ಸ್ಥಳದಲ್ಲೇ 30 ಪ್ರಕರಣಗಳಲ್ಲಿ 9,600 ರೂ. ಸಹಿತ 608 ಪ್ರಕರಣಗಳಲ್ಲಿ 1,35,350 ರೂ. ಮತ್ತು ಸಂಚಾರ ಪಶ್ಚಿಮದಲ್ಲಿ 302 ಪ್ರಕರಣಗಳಲ್ಲಿ 72,400 ರೂ., ಸ್ಥಳದಲ್ಲೇ 8 ಪ್ರಕರಣಗಳಲ್ಲಿ 3,700 ರೂ. ಸಹಿತ 310 ಪ್ರಕರಣಗಳಲ್ಲಿ 76,100 ರೂ. ವಸೂಲಿ ಮಾಡಲಾಗಿದೆ.

ಸಂಚಾರ ಉತ್ತರದಲ್ಲಿ 231ಪ್ರಕರಣಗಳಲ್ಲಿ 58,650 ರೂ., ಸ್ಥಳದಲ್ಲೇ 44 ಪ್ರಕರಣಗಳಲ್ಲಿ 14,400 ರೂ. ಸಹಿತ 275 ಪ್ರಕರಣಗಳಲ್ಲಿ 73,050 ರೂ., ಸಂಚಾರ ದಕ್ಷಿಣದಲ್ಲಿ 336 ಪ್ರಕರಣಗಳಲ್ಲಿ 80,300 ರೂ., ಸ್ಥಳದಲ್ಲೇ 9 ಪ್ರಕರಣಗಳಲ್ಲಿ 3,900 ರೂ. ಸಹಿತ 345 ಪ್ರಕರಣಗಳಲ್ಲಿ 84,200 ರೂ.ವಸೂಲಿ ಮಾಡಲಾಗಿದೆ.

ಎಸಿಪಿ ಸಂಚಾರ ಕಚೇರಿಯಲ್ಲಿ ಇ ಚಲನ್‌ನಲ್ಲಿ 71 ಪ್ರಕರಣಗಳಲ್ಲಿ 20,150 ರೂ., ಮಂಗಳೂರು ಒನ್ ಕೇಂದ್ರದಲ್ಲಿ ಇ ಚಲನ್‌ನಲ್ಲಿ 229 ಪ್ರಕರಣಗಳಲ್ಲಿ 51 ಸಾವಿರ ರೂ., ಅಂಚೆ ಕಚೇರಿಗಳಲ್ಲಿ ಇ ಚಲನ್‌ನಲ್ಲಿ 42 ಪ್ರಕರಣಗಳಲ್ಲಿ 10,100 ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್‌ರ ಪ್ರಕಟನೆ ತಿಳಿಸಿದೆ.

Similar News