ಮಂಗಳೂರು: ಮಾ.3ರಿಂದ 5ರವರೆಗೆ ಬಿಸಿಸಿಐಯಿಂದ 'ಬ್ಯಾರಿ ಮೇಳ-2023 ಉತ್ಸವ'

Update: 2023-02-08 06:52 GMT

ಮಂಗಳೂರು, ಫೆ.8: ಬ್ಯಾರೀಸ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (BEARYS CHAMBER OF COMMERCE & INDUSTRY- ಬಿಸಿಸಿಐ) ವತಿಯಿಂದ ಮಾರ್ಚ್ 3ರಿಂದ 5ರವರೆಗೆ 'ಬ್ಯಾರಿ ಮೇಳ-2023 ಉತ್ಸವ'ವನ್ನು ಮಂಗಳೂರು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಸಿಸಿಐ 'ಬ್ಯಾರಿ ಮೇಳದ ಸಂಚಾಲಕರಾದ ಮನ್ಸೂರ್ ಅಹ್ಮದ್(ಆಝಾದ್) ಮತ್ತು ಬಿ.ಎಂ.ಮಮ್ತಾಝ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಮೂರು ದಿನಗಳ ವಿಜೃಂಭಣೆಯ ಉತ್ಸವದಲ್ಲಿ, ವ್ಯಾಪಾರ ಮೇಳ, ವಸ್ತು ಪ್ರದರ್ಶನ, ಆಹಾರ ಮೇಳ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.5ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ಅವರ ಅರ್ಹತೆಯ ಮೇರೆಗೆ ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಉದ್ಯೋಗ ಮೇಳವನ್ನೂ ಹಮ್ಮಿಕೊಳ್ಳಲಾಗಿದೆ.

ವ್ಯಾಪಾರ ಮೇಳದ ಹಾಗೂ ಆಹಾರ ಮೇಳ (ಫುಡ್ ಕೋರ್ಟ್) ನಲ್ಲಿ ಭಾಗವಹಿಸಲಿಚ್ಚಿಸುವವರು ತಮ್ಮ ಮಳಿಗೆಗಾಗಿ ಈಗಾಗಲೇ ಮುಂಗಡವಾಗಿ ನಿಗದಿಪಡಿಸಿಕೊಳ್ಳಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿಚ್ಚಿಸುವ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಆಸಕ್ತರು ಕೂಡಲೇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಕಚೇರಿಯ ದೂ.ಸಂ.: 0824-4262323 ಅಥವಾ ಮೊ.ಸಂ.: 9535563897 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸುವಂತೆ ಬಿಸಿಸಿಐ ಅಧ್ಯಕ್ಷ ಡಾ.ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News