ಗೂಗಲ್ AI Chat Bot ಪ್ರಮಾದ: 100 ಬಿಲಿಯನ್ ಶೇರು ನಷ್ಟ ಅನುಭವಿಸಿದ ಆಲ್ಫಬೆಟ್ ಇಂಕ್.!

Update: 2023-02-09 11:47 GMT

ಕ್ಯಾಲಿಫೋರ್ನಿಯಾ: ಮಾರುಕಟ್ಟೆ ಉತ್ತೇಜನ ವಿಡಿಯೊದಲ್ಲಿ ಗೂಗಲ್‌ನ ಕೃತಕ ಬುದ್ಧಿಮತ್ತೆಯ ಸಂವಾದಿ ರೊಬೊಟ್ 'ಬಾರ್ಡ್' ಅಸಮರ್ಪಕ ಮಾಹಿತಿ ನೀಡಿದ್ದರಿಂದಾಗಿ ಬುಧವಾರ ಗೂಗಲ್‌ನ ಮಾತೃ ಸಂಸ್ಥೆ ಆಲ್ಫಬೆಟ್ ಇಂಕ್ ಮಾರುಕಟ್ಟೆಯಲ್ಲಿ 100 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ. ಇದರೊಂದಿಗೆ ಸಂಸ್ಥೆಯ ಮಾರುಕಟ್ಟೆ ಉತ್ತೇಜನ ಕಾರ್ಯಕ್ರಮವೂ ವಿಫಲವಾಗಿದ್ದು, ತನ್ನ ಪ್ರತಿಸ್ಪರ್ಧಿ ಸಂಸ್ಥೆಯಾದ ಮೈಕ್ರೊಸಾಫ್ಟ್ ಕಾರ್ಪೊರೇಷನ್‌ಗೆ ಆಲ್ಫಬೆಟ್ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ ಎಂಬ ಕಳವಳ ಸೃಷ್ಟಿಯಾಗಿದೆ ಎಂದು ndtv.com ವರದಿ ಮಾಡಿದೆ.

ಬುಧವಾರದ ಸಾಮಾನ್ಯ ವಹಿವಾಟಿನಲ್ಲಿ ಶೇ. 9ರಷ್ಟು ಕುಸಿತ ದಾಖಲಿಸಿದ ಆಲ್ಫಬೆಟ್ ಶೇರುಗಳು, 50 ದಿನಗಳ ಹಿಂದಿನ ಸರಾಸರಿ ವಹಿವಾಟು ಸ್ಥಿತಿಗೆ ತಲುಪಿದವು. ವಹಿವಾಟು ಶುರುವಾದ ಕೆಲವೇ ಗಂಟೆಗಳಲ್ಲಿ ಕುಸಿತ ದಾಖಲಿಸಿದ ಆಲ್ಫಬೆಟ್ ಶೇರುಗಳು, ಗಣನೀಯ ನಷ್ಟ ಅನುಭವಿಸಿದವು. ಕಳೆದ ವರ್ಷ ಆಲ್ಫಬೆಟ್ ಶೇರುಗಳು ಶೇ. 40ರಷ್ಟು ನಷ್ಟ ಅನುಭವಿಸಿದ್ದವಾದರೂ, ಬುಧವಾರದ ವಹಿವಾಟನ್ನು ಹೊರತುಪಡಿಸಿ, ಈ ವರ್ಷದಲ್ಲಿ ಶೇ. 15ರಷ್ಟು ಗಳಿಕೆ ಕಂಡಿದ್ದವು.

ಸೋಮವಾರ ಪ್ರಸಾರವಾದ ಗೂಗಲ್‌ನ ಸಂವಾದಿ ರೊಬೊಟ್ 'ಬಾರ್ಡ್' ಕುರಿತ ಜಾಹೀರಾತಿನಲ್ಲಿನ ಲೋಪವನ್ನು ರಾಯಿಟರ್ಸ್‌‌‌ ಸುದ್ದಿ ಸಂಸ್ಥೆ ಮೊತ್ತಮೊದಲು ಗುರುತಿಸಿತ್ತು. ಇದರಲ್ಲಿನ ಉಪಗ್ರಹವು ಭೂಮಿಯ ಸೌರವ್ಯೂಹದಿಂದ ಹೊರಗಿರುವ ಗ್ರಹದ ಭಾವಚಿತ್ರವನ್ನು ಮೊದಲಿಗೆ ಸೆರೆ ಹಿಡಿಯುವುದನ್ನು ಕಂಡು ಹಿಡಿದಿತ್ತು.

Similar News