×
Ad

ಮುಂಬಯಿ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ದೈನಂದಿನ ಎಕ್ಸ್‌ಪ್ರೆಸ್ ರೈಲು ಇನ್ನು ವಿದ್ಯುತ್‌ಚಾಲಿತ

Update: 2023-02-09 18:50 IST

ಉಡುಪಿ: ನಂ. 12133 ಮುಂಬಯಿಯ ಸಿಎಸ್‌ಎಂಟಿ ಹಾಗೂ ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲು ಇದೇ ಫೆ.16 ಗುರುವಾರದಿಂದ ವಿದ್ಯುತ್ ಚಾಲಿತ ರೈಲಾಗಿ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಅದೇ ರೀತಿ ನಂ.12134 ಮಂಗಳೂರು ಜಂಕ್ಷನ್- ಮುಂಬಯಿ ಸಿಎಸ್‌ಎಂಟಿ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲು ಫೆ.17ರ ಶುಕ್ರವಾರದಿಂದ ವಿದ್ಯುತ್ ಚಾಲಿತ ರೈಲಾಗಿ ಸಂಚರಿಸಲಿದೆ.

ಉಳಿದಂತೆ ಎರ್ನಾಕುಲಂ ಜಂಕ್ಷನ್- ಲೋಕಮಾನ್ಯ ತಿಲಕ್ ನಡುವೆ ವಾರಕ್ಕೆರಡು ಬಾರಿ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಫೆ.15ರಿಂದ, ಎರ್ನಾಕುಲಂ ಜಂಕ್ಷನ್-ಪುಣೆ ಜಂಕ್ಷನ್ ನಡುವೆ ವಾರಕ್ಕೆರಡು ಬಾರಿ ಓಡಾಡುವ ಎಕ್ಸ್‌ಪ್ರೆಸ್ ರೈಲು ಫೆ.15ರಿಂದ ವಿದ್ಯುತ್ ಚಾಲಿತ ರೈಲಾಗಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Similar News