×
Ad

ಅಜೆಕಾರು| ಹೈನುಗಾರಿಕೆ ಉದ್ಯಮದಲ್ಲಿ ನಷ್ಟ: ಯುವಕ ಆತ್ಮಹತ್ಯೆ

Update: 2023-02-11 21:33 IST

ಅಜೆಕಾರು: ಹೈನುಗಾರಿಕೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಚಿಂತೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮರ್ಣೆ ಗ್ರಾಮದ ಕುರ್ಪಾಡಿ ಎಂಬಲ್ಲಿ ಡಿ.10ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಕುರ್ಪಾಡಿ ದಿ.ಗೋಪಾಲ ಪೂಜಾರಿ ಎಂಬವರ ಮಗ ಶ್ರೀನಿವಾಸ ಪೂಜಾರಿ(25) ಎಂದು ಗುರುತಿಸಲಾಗಿದೆ. ಇವರು ವೆಲ್ಡಿಂಗ್ ವರ್ಕ್‌ಶಾಪ್ ನಲ್ಲ್ ಕೆಲಸ ಮಾಡಿಕೊಂಡಿದ್ದು, ಅದರ ಜೊತೆಗೆ ಹೈನುಗಾರಿಕೆಯನ್ನೂ ಕೂಡಾ ನಡೆಸುತ್ತಿದ್ದರು.

ಹೈನುದ್ಯಮದಲ್ಲಿ ನಷ್ಟವನ್ನು ಹೊಂದಿದ ಕಾರಣದಿಂದ ಶ್ರೀನಿವಾಸ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News