×
Ad

ಇಸ್ರೇಲ್: ನೆತನ್ಯಾಹು ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ

Update: 2023-02-12 23:27 IST

ಟೆಲ್ಅವೀವ್, ಫೆ.12: ನ್ಯಾಯಾಂಗದಲ್ಲಿ ಕೂಲಂಕುಷ ಬದಲಾವಣೆ ತರುವ ಇಸ್ರೇಲ್ ಸರಕಾರದ ಯೋಜನೆಯನ್ನು ವಿರೋಧಿಸಿ ಶನಿವಾರ ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬೆಂಜಮಿನ್ ನೆತನ್ಯಾಹು ನೇತೃತ್ವದ ಸರಕಾರ ಜಾರಿಗೊಳಿಸಿರುವ ಕ್ರಮಗಳು ಸುಪ್ರೀಂಕೋರ್ಟನ್ನು ದುರ್ಬಲಗೊಳಿಸುವ ಜತೆಗೆ, ನ್ಯಾಯಾಂಗದ ಅಧಿಕಾರವನ್ನು ಸೀಮಿತಗೊಳಿಸಿ ರಾಜಕಾರಣಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕಳೆದ 6 ವಾರಗಳಿಂದ ಬೃಹತ್ ರ್ಯಾಲಿಗಳ ಮೂಲಕ ಭಾರೀ ಪ್ರತಿಭಟನೆ ನಡೆಯುತ್ತಿದ್ದರೂ ಇದಕ್ಕೆ ಗಮನ ನೀಡದ ಸರಕಾರ ಸೋಮವಾರ ಸಂಸತ್ತಿನಲ್ಲಿ ಕೆಲವು ಮಸೂದೆಗಳನ್ನು ಮಂಡಿಸಲು ಯೋಜಿಸಿದೆ ಎಂದು ವರದಿಯಾಗಿದೆ.

Similar News