ಫೆ.21ರಿಂದ 25ರವರೆಗೆ ಪರಪ್ಪು ದರ್ಗಾ ಶರೀಫ್‌ನ ಉರೂಸ್
ಬೆಳ್ತಂಗಡಿ, ಫೆ.14: ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್‌ನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು ಫೆ.21ರಿಂದ 25ರವರೆಗೆ ಖಾಝಿ ಶೈಖುನಾ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪರಪ್ಪು ಮಸೀದಿ ಖತೀಬ್ ತಾಜುದ್ದೀನ್ ಸಖಾಫಿ ಕುಂದಾಪುರ ತಿಳಿಸಿದ್ದಾರೆ.
ಬೆಳ್ತಂಗಡಿಯ ಪತ್ರಿಕಾ ಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಅವರು, ಉರೂಸ್ ಪ್ರಯುಕ್ತ ಫೆ.21ರಂದು ಸಂಜೆ ಪರಪ್ಪ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಅಬೂಬಕರ್ ಹಾಜಿ ಧ್ವಜಾರೋಹಣಗೈಯಲಿದ್ದಾರೆ. ರಾತ್ರಿ 8 ಗಂಟೆಗೆ ಪರಪ್ಪು ಮಸೀದಿ ಖತೀಬ್ ತಾಜುದ್ದೀನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಸ್ಸೈಯದ್ ಜಮಲುಲೈಲಿ ತಂಙಳ್ ವಾದಿ ಇರ್ಫಾನ್ ದುಆಗೈಯುವರು. ಸುರಿಬೈಲು ಮುಹಮ್ಮದಲಿ ಸಖಾಫಿಯವರು ತಾಜುಲ್ ಉಲಮಾ ಅನುಸರಣಾ ಭಾಷಣಗೈಯಲಿದ್ದಾರೆ. ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಬಿ.ಕೆ.ರವೂಫ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಫೆ.22 ರಂದು ಮಸೂದ್ ಸಖಾಫಿ ಗೂಡಲ್ಲೂರು ಮುಖ್ಯ ಭಾಷಣಗೈಯಲಿದ್ದಾರೆ. ಫೆ.23ರಂದು ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ದುಆಗೈಯುವರು. ತಾಜುದ್ದೀನ್ ಸಖಾಫಿ ಪ್ರವಚನ ನೀಡುವರು. ಫೆ.24ರಂದು ವಹಾಬ್ ಸಖಾಫಿ ಮಂಬಾಡ್ ಪ್ರವಚನ ನೀಡುವರು.
ಫೆ.25ರಂದು ಉರೂಸ್ -ಸಮಾರೋಪ ಸಮಾರಂಭ ಜರುಗಲಿದೆ. ಅಸ್ಸೈಯದ್ ಕೂರತ್ ತಂಙಳ್ ಅಧ್ಯಕ್ಷತೆಯಲ್ಲಿ ಆಧ್ಯಾತ್ಮಿಕ ಮಜ್ಜಿಸ್ ಹಾಗೂ ಸಾಮೂಹಿಕ ಝಿಯಾರತ್' ಕಾರ್ಯಕ್ರಮ ನಡೆಯಲಿದೆ. ರಾತ್ರಿ ಸೈಯದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್ ದುಆ ನೆರವೇರಿಸುವರು. ಜಾರಿಗೆಬೈಲು ಮಸೀದಿಯ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್-ಫುರ್ಖಾನಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮನ್ಶರ್ ತಂಜಳ್ ಭಾಷಣಗೈಯಲಿದ್ದಾರೆ. ಕೇರಳದ ಪ್ರಮುಖ ವಿದ್ವಾಂಸ ಶಾಫಿ ಲತೀಫಿ ನುಚ್ಚಾಡು ಮುಖ್ಯ ಭಾಷಣಗೈಯಲಿದ್ದಾರೆ. ಹಾಗೂ ಇನ್ನಿತರ ಹಲವಾರು ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆಂದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬ್ದುಲ್ ಕರೀಮ್ ಗೇರುಕಟ್ಟೆ, ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಬಿ.ಕೆ.ರವೂಫ್, ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕರ್ ಪೆಳತ್ತಲಿಕೆ, ಕೋಶಾಧಿಕಾರಿ ಎಂ.ಕೆ.ಯೂಸುಫ್ ಉಪಸ್ಥಿತರಿದ್ದರು.