×
Ad

ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ ಬೋಟ್ ಗಳ ಮೇಲೆ ಕಲ್ಲು ತೂರಾಟ: ಮೀನುಗಾರರಿಗೆ ಗಾಯ

ಕನ್ಯಾಕುಮಾರಿಯ ಸಮುದ್ರ ಮಧ್ಯೆ ತಮಿಳುನಾಡಿನ ಮೀನುಗಾರರಿಂದ ಕೃತ್ಯ: ಆರೋಪ

Update: 2023-02-14 15:20 IST

ಮಂಗಳೂರು, ಫೆ.14: ಮಂಗಳೂರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಳ ಮೇಲೆ ತಮಿಳುನಾಡಿನ ಕನ್ಯಾಕುಮಾರಿ ಬಳಿ ಕಲ್ಲು ತೂರಾಟ ನಡೆಸಿರುವ ಘಟನೆ ವರದಿಯಾಗಿದೆ. ಇದರಿಂದ ಮಂಗಳೂರಿನ ಬೋಟ್ ಗಳಲ್ಲಿದ್ದ ಏಳೆಂಟು ಮೀನುಗಾರರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರು ಮೂಲದ ಏಳೆಂಟು ಬೋಟ್ ಗಳು ತಮಿಳುನಾಡಿನ ಕನ್ಯಾಕುಮಾರಿ ಬಳಿ ಮೀನುಗಾರಿಕೆಯಲ್ಲಿ ನಿರತವಾಗಿದ್ದ ವೇಳೆ ಈ ಕೃತ್ಯ ನಡೆದಿದೆ. ಇವರ ಬೋಟ್ ಗಳನ್ನು ತಮಿಳು ಮಾತನಾಡುತ್ತಿದ್ದ ಮೀನುಗಾರರಿದ್ದ ಹತ್ತಾರು ಬೋಟ್ ಗಳು ಸಮುದ್ರ ಮಧ್ಯೆ ಸುತ್ತುವರಿದಿವೆ. ಈ ವೇಳೆ ಆ ಬೋಟ್ ಗಳಿದ್ದವರು ಕಲ್ಲು ತೂರಾಟ ನಡೆಸುತ್ತಿರುವುದನ್ನು ಮಂಗಳೂರಿನಿಂದ ತೆರಳಿದ್ದ ಬೋಟ್ ನಲ್ಲಿದ್ದ ಕೆಲವರು ವೀಡಿಯೋ ಮಾಡಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Similar News