×
Ad

ಮಂಗಳ ಸಮೂಹ ವಿದ್ಯಾಸಂಸ್ಥೆಯಲ್ಲಿ ರಕ್ತದಾನ ಶಿಬಿರ

Update: 2023-02-15 19:09 IST

ಮಂಗಳೂರು: ಮಂಗಳ ಕಾಲೇಜ್‌ನ  ಯೂತ್ ರೆಡ್ ಕ್ರಾಸ್ ಘಟಕ  ಮತ್ತು ಎನ್‌ಎಸ್‌ಎಸ್ ಘಟಕ, ಜ್ಯೋತಿ ಕೆ.ಎಂ.ಸಿ ಬ್ಲಡ್ ಸೆಂಟರ್ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವ ಮಂಗಳ ಸಮೂಹ ವಿದ್ಯಾಸಂಸ್ಥೆಗಳ ಕ್ಯಾಂಪಸ್‌ನಲ್ಲಿ  ನಡೆಯಿತು.

ಕೆಎಂಸಿ ಆಸ್ಪತ್ರೆಯ ಡಾ.ರಂಜಿತಾರಾವ್  ಕಾರ್ಯಕ್ರಮ ಉದ್ಘಾಟಿಸಿದರು. ಶಿಬಿರದಲ್ಲಿ ಮಂಗಳ ಸಮೂಹ ವಿದ್ಯಾಸಂಸ್ಥೆಗಳ ಡೀನ್ ಪ್ರೊ. ಪ್ರತಿಜ್ಞಾ ಸುಹಾಸಿನಿ ಜಿ.ಆರ್, ಸಹ ಪ್ರಾಂಶುಪಾಲೆ ಪ್ರೊ. ಗೀತಾಲಕ್ಷ್ಮೀ, ಯೂತ್ ರೆಡ್ ಕ್ರಾಸ್ ಘಟಕದ ಅಧಿಕಾರಿ ಪ್ರೊ.ವಿಜೇತಶೀನ, ಅಸಿಸ್ಟೆಂಟ್ ಪ್ರೊ. ಅಭಿನೀತ, ಪ್ರಾಧ್ಯಾಪಕಿ ಶರಣ್ಯ, ಎನ್ ಎಸ್ ಎಸ್ ಘಟಕಾಧಿಕಾರಿ  ಮಿಥುನ್ ವೇಣುಗೋಪಾಲ್ ಮತ್ತು ಅಸಿಸ್ಟೆಂಟ್ ಪ್ರೊ. ಜಯಂತ್ ನಾಯಕ್, ಡಾ ಶೈಲಿನಿರಾವ್, ನ್ಯೂ ಮಂಗಳ ನರ್ಸಿಂಗ್ ಪ್ರಾನ್ಸಿಪಾಲೆ ಡಾ. ಮೆರಿ ಎಲಿಜಬೆತ್ ಪಿಂಟೋ, ಮಂಗಳ ಫಿಸಿಯೊಥೆರಪಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಭರತ್ ಉಪಸ್ಥಿತರಿದ್ದರು.

ಮಂಗಳ ಕಾಲೇಜಿನ ಅಫ್ತಾಲ್ಮೋಜಿ ವಿಭಾಗದ ಪ್ರಾಧ್ಯಾಪಕ ತಮಿಲ್ ಸೆಲ್ವನ್(ರಿಸರ್ಚ್‌ಅಸೋಸಿಯೇಟ್) ಪ್ರಥಮವಾಗಿ ರಕ್ತದಾನ ಮಾಡಿದರು. ಕುಮಾರಿ ವಿಜಿತ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ನಿಧಿ ವಂದಿಸಿದರು.

Similar News