ಫೆ.18ರಿಂದ ಮಾಧವ ನಾರಾಯಣ ಶಾಸ್ತ್ರೀಯ ಸಂಗೀತ ಉತ್ಸವ
Update: 2023-02-15 19:12 IST
ಮಂಗಳೂರು: ಸ್ವರಾಕಾಂಕ್ಷ ಇದರ ಅಂಗ ಸಂಸ್ಥೆಯಾದ ಅಭಿನವ ಸ್ವರ ಶಾಲಾ ಸಂಗೀತ ವಿದ್ಯಾಲಯ 10ನೇ ವರ್ಷದ ಸಂಭ್ರಮದ ಅಂಗವಾಗಿ ಫೆ. 18 ಹಾಗೂ 19ರಂದು ಸಂಜೆ 3.30ರಿಂದ 8.30ರ ವರೆಗೆ ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಮಾಧವ ನಾರಾಯಣ ಶಾಸ್ತ್ರೀಯ ಸಂಗೀತ ಉತ್ಸವ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಪಂಡಿತ ರವಿಕಿರಣ್ ಮಣಿಪಾಲ ತಿಳಿಸಿದ್ದಾರೆ.
ಅವರು ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಂಗೀತ ಉತ್ಸವವನ್ನು ಸಂಗೀತ ಗುರುಗಳಾದ ಪಂ. ಜಿ. ಮಾಧವ ಭಟ್ ಹಾಗೂ ಪಂ. ನಾರಾಯಣ ಪಂಡಿತ್ ಅವರ ಸಂಸ್ಮರಣೆಯ ಅಂಗವಾಗಿ ನಡೆಸಲಾಗುತ್ತಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಅಮಿತ್ ಕುಮಾರ್ ಬೆಂಗ್ರೆ, ದೇವದಾಸ್ ಹೆಗ್ಡೆ ಉಪಸ್ಥಿತರಿದ್ದರು.