ಇರಾ ಗ್ರಾ.ಪಂ. ಮಾಜಿ ಸದಸ್ಯೆ ದೇವಕಿ ನಿಧನ
Update: 2023-02-15 19:55 IST
ಕೊಣಾಜೆ: ಇರಾ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಇರಾ ಮುಗುಳ್ಯ ನಿವಾಸಿ ದೇವಕಿ (88) ರವರು ಬುಧವಾರ ಸ್ವಗ್ರಹದಲ್ಲಿ ನಿಧನರಾದರು.
ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಅವರು ಇರಾ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು. ಮೃತರು 3 ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರಾಜ್ಯ ವಿಪಕ್ಷ ಉಪನಾಯಕರೂ, ಶಾಸಕರಾದ ಯು ಟಿ ಖಾದರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಮತಾ ಡಿ ಎಸ್ ಗಟ್ಟಿ, ಪಕ್ಷದ ನಾಯಕರಾದ ಅಬ್ದುಲ್ ಜಲೀಲ್ ಮೊಂಟುಗೋಳಿ, ನಾಸೀರ್ ನಡುಪದವು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಗ್ನೇಸ್ ಡಿ ಸೋಜ, ಉಪಾಧ್ಯಕ್ಷರಾದ ಮೊಯ್ದು ಕುಂಞಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪುಷ್ಪಲತಾ ಕರ್ಕೇರ, ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಂಪಿಲ ಸಂತಾಪ ಸೂಚಿಸಿದ್ದಾರೆ.