×
Ad

ಸುರತ್ಕಲ್: ಗಾಂಜಾ ಸೇವನೆ ಆರೋಪ ಮೂವರ ಸೆರೆ

Update: 2023-02-15 22:54 IST

ಮಂಗಳೂರು: ಸುರತ್ಕಲ್, ಕಾಟಿಪಳ್ಳ, ಚೊಕ್ಕಬೆಟ್ಟು ಪರಿಸರದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿಯರನ್ನು ಪಂಜಿಮೊಗರು ನಿವಾಸಿ ಕಲಂದರ್ ಶಾಫಿ (೩೮), ಕಾವೂರು ಸಫಾನಗರ ನಿವಾಸಿ ಇರ್ಷಾದ್ (೩೮), ಕೃಷ್ಣಾಪುರ ನಿವಾಸಿ ಕಲಂದರ್ (೩೫) ಎಂದು ಗುರುತಿಸಲಾಗಿದೆ.

ಫೆ.೧೪ರಂದು ಕಾಟಿಪಳ್ಳ ಗ್ರಾಮದ ಚೊಕ್ಕಬೆಟ್ಟು ಮೈದಾನ ಬಳಿ ಗಾಂಜಾ ಸೇವನೆ ಮಾಡಿ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಧೃಢಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News