×
Ad

ಪಾಕಿಸ್ತಾನ: ರೈಲಿನಲ್ಲಿ ಸ್ಫೋಟ; ಇಬ್ಬರು ಮೃತ್ಯು, 9 ಮಂದಿಗೆ ಗಾಯ

Update: 2023-02-16 22:48 IST

ಇಸ್ಲಮಾಬಾದ್, ಫೆ.16: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಪ್ರಯಾಣಿಕರ  ರೈಲಿನಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ 2 ಮಂದಿ ಮೃತಪಟ್ಟಿದ್ದು 9 ಮಂದಿ  ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಾವಲ್ಪಿಂಡಿಯಿಂದ ಕ್ವೆಟಾಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲು ಚಿಚಾವತ್ ನ ರೈಲು ನಿಲ್ದಾಣ ದಾಟುತ್ತಿದ್ದಂತೆಯೇ ಇಕಾನಮಿ ವರ್ಗದ 6ನೇ ಬೋಗಿಯ ಲ್ಲಿ ಸ್ಫೋಟ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಗಾಯಗೊಂಡವರನ್ನು  ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ತುರ್ತು ಕಾರ್ಯಪಡೆಯ ಸಿಬಂದಿ ಧಾವಿಸಿದ್ದು ನಾಕಾಬಂದಿ ನಡೆಸಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಆರ್ವೈ ನ್ಯೂಸ್ ವರದಿ ಮಾಡಿದೆ. ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(TTP) ಸ್ಫೋಟದ ಹೊಣೆ ವಹಿಸಿಕೊಂಡಿದೆ ಎಂದು `ಡಾನ್' ವರದಿ ಮಾಡಿದೆ. 

ಬಲೂಚಿಸ್ತಾನದ ಕಚ್ಛಿ ಜಿಲ್ಲೆಯಲ್ಲಿ ಜನವರಿ 30ರಂದೂ ಜಾಫರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸ್ಫೋಟ ಸಂಭವಿಸಿ ಕನಿಷ್ಟ 8 ಪ್ರಯಾಣಿಕರು ಗಾಯಗೊಂಡಿದ್ದರು

Similar News