ಯು-ಟ್ಯೂಬ್ ಸಿಇಓ ಆಗಿ ಭಾರತೀಯ ಮೂಲದ ನೀಲ್ ಮೋಹನ್

Update: 2023-02-17 03:18 GMT

ವಾಷಿಂಗ್ಟನ್: ವಿಶ್ವದ ಅತಿದೊಡ್ಡ ಆನ್‌ಲೈನ್ ವಿಡಿಯೊ ಪ್ಲಾಟ್ ಫಾರ್ಮ್ ಆಗಿರುವ ಯು-ಟ್ಯೂಬ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ಸುಸಾನ್ ವೊಜಿಸಿಕಿ ಕೆಳಗಿಳಿದಿದ್ದು, ಯು-ಟ್ಯೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿ ಭಾರತೀಯ ಮೂಲದ ನೀಲ್ ಮೋಹನ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ಸುಸಾನ್ ಒಂಬತ್ತು ವರ್ಷ ಕಾಲ ಈ ಹುದ್ದೆಯಲ್ಲಿದ್ದರು. ಕುಟುಂಬ, ಆರೋಗ್ಯ ಮತ್ತು ತಮ್ಮ ಇಷ್ಟದ ವೈಯಕ್ತಿಕ ಯೋಜನೆಗಳಿಗೆ ಗಮನ ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ಹುದ್ದೆಯನ್ನು ತೆರವುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೊದಲು ಗೂಗಲ್‌ನ ಆ್ಯಡ್ ಪ್ರಾಡಕ್ಟ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸುಸಾನ್, 2014ರಲ್ಲಿ ಯು-ಟ್ಯೂಬ್ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಗೂಗಲ್‌ನ ಆರಂಭಿಕ ಉದ್ಯೋಗಿಗಳಲ್ಲೊಬ್ಬರಾದ ಇವರು, ಇದರ ಮಾತೃಸಂಸ್ಥೆ ಅಲ್ಫಾಬೆಟ್ ಇನ್‌ಕಾರ್ಪೊರೇಷನ್‌ನಲ್ಲಿ 25 ವರ್ಷ ಕಾಲ ಸೇವೆ ಸಲ್ಲಿಸಿದ್ದರು.

Similar News