ಬೈಂದೂರು: ಮನೆಗೆ ನುಗ್ಗಿ ಚಿನ್ನದ ಕರಿಮಣಿ ಸರ ಕಳವು
Update: 2023-02-18 16:34 IST
ಬೈಂದೂರು : ಮನೆಯ ಕೋಣೆಯಲ್ಲಿದ್ದ ಚಿನ್ನದ ಕರಿಮಣಿ ಸರ ಕಳವು ಮಾಡಿರುವ ಘಟನೆ ಕಾಲ್ತೋಡು ಗ್ರಾಮದ ಯಡೇರಿ ಗುರಮಕ್ಕಿ ಎಂಬಲ್ಲಿ ನಡೆದಿದೆ.
ಗುರಮಕ್ಕಿಯ ಸುರೇಂದ್ರ ಪೂಜಾರಿ ಎಂಬವರ ಮನೆಯ ಕೆಲಸಕ್ಕೆ ಸಂಬಂಧಿಸಿ ಲೆಕ್ಕಾಚಾರ ಮಾಡಿ ಕಾಮಗಾರಿ ನಡೆಸಿದ ಮಹಂತೇಶ್‌ಗೆ ಬಾಕಿ ಹಣ ನೀಡಿದ್ದರು. 15 ದಿನಗಳ ನಂತರ ವಾಪಾಸ್ಸು ಬಂದ ಮಹಂತೇಶ್ ಹಣ ನೀಡುವಂತೆ ಮತ್ತೆ ತಗಾದೆ ಎಬ್ಬಿಸಿದರು ಎಂದು ಹೇಳಲಾಗಿದ್ದು, ಡಿ.31ರಂದು ಮಹಾಂತೇಶ್, ಸುರೇಂದ್ರ ಪೂಜಾರಿಯ ಮನೆಯ ಕೋಣೆ ಒಳಗೆ ನುಗ್ಗಿ ಅವರ ತಂಗಿಯ 24 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.